KGF ಟ್ರೈಲರ್ ಬಿಡುಗಡೆ ಅವತ್ತೇ!! ಮತ್ತೊಂದು ರೆಕಾರ್ಡ್ ಮಾಡಲು ಸಿದ್ಧ!!

0
229

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಟೀಸರ್ ಈ ಹಿಂದೆ ಬಿಡುಗಡೆಯಾಗಿ ಅನೇಕ ರೆಕಾರ್ಡ್ಗಳನ್ನು ಸೃಷ್ಟಿಸಿತ್ತು. ಪ್ರಸ್ತುತ ಈ ಟೀಸರ್ ಗೆ ಈಗ 3.5 ಮಿಲಿಯನ್ ವೀಕ್ಷಣೆ  ಗಳು ಬಂದಿದ್ದು ಅತಿ ಹೆಚ್ಚು ವೀಕ್ಷಿಸಿದ ಟೀಸರ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಜನವರಿ 8 ರಂದು ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಈ ಟೀಸರ್ ಕೇವಲ ಒಂದು ತಿಂಗಳಲ್ಲಿ ಇಷ್ಟು ಮಟ್ಟದ  ವೀಕ್ಷಣೆ ಪಡೆದು ಹೊಸ ರೆಕಾರ್ಡನ್ನು ಸೃಷ್ಟಿ ಮಾಡಿದೆ

ಆ ಟೀಸರ್ ನ ಕೊನೆಯಲ್ಲಿ ಚಿತ್ರತಂಡವು ಟ್ರೈಲರ್ ಅನ್ನು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇನ್ನೂ ಯಾವುದೇ ರೀತಿಯ ದಿನಾಂಕವನ್ನು ಘೋಷಿಸದೆ ಚಿತ್ರತಂಡವು ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿತ್ತು . ಆದರೆ ಈಗ ಆ ನಿರಾಸೆಗೆ ತೆರೆ ಬಿದ್ದಿದೆ. ಇದೇ ತಿಂಗಳ 25 ರಂದು ಕೆಜಿಎಫ್ ಚಿತ್ರದ ಟ್ರೈಲರ್ ಬಿಡುಗಡೆ ಯಾಗುತ್ತಿದೆ.  ಕೇವಲ ಒಂದು ಟೀಸರ್ ನಿಂದಲೇ ಅಷ್ಟು ದೊಡ್ಡಮಟ್ಟದ ರೆಕಾರ್ಡ್ ಸೃಷ್ಟಿಸಿದ್ದ ಯಶ್ ಇನ್ನು ಟ್ರೈಲರ್ ಮೂಲಕ ಎಷ್ಟು ದೊಡ್ಡ ಮಟ್ಟದ ರೆಕಾರ್ಡ್ ಸೃಷ್ಟಿಸುತ್ತಾರೆ ಈಗ ಎಲ್ಲರಲ್ಲೂ ಇರುವ ಕುತೂಹಲ. ಇನ್ನು ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗುವುದು ಖಂಡಿತ.

LEAVE A REPLY

Please enter your comment!
Please enter your name here