ಕಾಡುವ ನೆನಪುಗಳ ಮಾಲ್ಗುಡಿ ಡೇಸ್..!

ಮಾಲ್ಗುಡಿ ಡೇಸ್ ಎಂದಾಕ್ಷಣ ಎಲ್ಲರ ನೆನಪಿಗೂ ಬರುವುದು ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್. ಇದೀಗ ಅದೇ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ಬಿಡುಗಡೆಯಾಗಿದೆ. ಹೌದು ಈ ಚಿತ್ರದ ಬಗ್ಗೆ ನಿಮಗೆ ಹೆಚ್ಚೇನು ಹೇಳೋ ಅವಶ್ಯಕತೆ ಇಲ್ಲ ಯಾಕೆಂದರೆ ಎಲ್ಲೆಡೆ ಮಾಲ್ಗುಡಿ ಡೇಸ್ ಸೌಂಡ್ ಜೋರಾಗಿದೆ. ಹೌದು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರ ಇಂದು ಬಿಡುಗಡೆಯಾಗಿದೆ.

ಬಿಡುಗಡೆಗೂ ಮುನ್ನ ಟ್ರೈಲರ್ & ವಿಜಯ ರಾಘವೇಂದ್ರ ಅವರ ಗೆಟಪ್ ನಿಂದ ಸಾಕಷ್ಟು ಸದ್ದು ಮ‍ಾಡಿದ್ದ ಮ‍ಾಲ್ಗುಡಿ ಡೇಸ್ ಇಂದಿನಿಂದ ಥಿಯೇಟರ್‌ ನಲ್ಲಿ ಸೌಂಡ್ ಮಾಡ್ತಿದೆ. ಒಂದೊಳ್ಳೆ ಫೀಲ್ ಕೊಡುವ ಸಿನಿಮಾ ನೋಡಬೇಕು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಮಾಲ್ಗುಡಿ ಡೇಸ್ ಸಿನಿಮಾ ಹೇಳಿ ಮಾಡಿಸಿದ ಚಿತ್ರ ಎನ್ನಬಹುದು ಯಾಕೆಂದರೆ ಚಿತ್ರದಲ್ಲಿ ಹಳೆಯ ದಿನಗಳ ಕತೆ ಇದೆ, ಹಳೆಯ ನೆನಪುಗಳೂ ಇವೆ, ನೆನಪಿನ ಜೊತೆ ಸಾಗುವ ಪ್ರಸ್ತುತ ಜೀವನವೂ ಇದೆ.

ಹೀಗೆ ಹಳೆಯ ನೆನಪು & ಪ್ರಸ್ತುತ ಜೀವನದ ನಡುವೆ ಫೀಲ್ ಗುಡ್ ಚಿತ್ರಕತೆ ಸಾಗುತ್ತದೆ. ಒಬ್ಬ ಖ್ಯಾತ ಸಾಹಿತಿಯ ಜೀವನದಲ್ಲಿ ನಡೆದ ಹಳೆಯ ಘಟನೆಗಳು & ಅದರಿಂದಾಗೋ ಪರಿಣಾಮದ ಬಗ್ಗೆ ಚಿತ್ರದಲ್ಲಿ ತುಂಬಾ ವಿಭಿನ್ನವಾಗಿ ತೋರಿಸಲಾಗಿದೆ. ಜೀವನವೆಂದರೆ ಬರೀ ದುಡ್ಡು , ಸೋಶಿಯಲ್ ಮೀಡಿಯಾ , ಮೋಜು ಮಸ್ತಿ ಎನ್ನೋ ಈ ಕಾಲದ ಪೀಳಿಗೆಗೆ ಹಳೆಯ ಕಾಲದ ಸ್ನೇಹ ಎಂದರೇನು? ಬಂಧ ಹೇಗಿರುತ್ತೆ? ಅದರ ಆಳ ಎಷ್ಟರ ಮಟ್ಟದ್ದು ಎಂಬುದನ್ನು ತುಂಬಾ ಅಚ್ಚುಕಟ್ಟಾಗಿ, ಮನಸ್ಸಿಗೆ ನಾಟುವಂತೆ , ನಾವೂ ಕೂಡ ಬದಲಾಗಿ ಈ ತರ ಜೀವಿಸೋಣ ಎನ್ನುವ ಹಾಗೆ ಚಿತ್ರದಲ್ಲಿ ತೋರಿಸಲಾಗಿದೆ.

ಲಕ್ಷ್ಮಿ ನಾರಾಯಣ ಮಾಲ್ಗುಡಿ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರದ್ದು ಅದ್ಭುತ ನಟನೆ.. ಮುಂದೆ ಪ್ರತಿಷ್ಠಿತ ಅವಾರ್ಡ್ ಗಳು ಬರುವ ಮಟ್ಟದಲ್ಲಿ ವಿಜಯ ರಾಘವೇಂದ್ರ ಅವರು ನಟಿಸಿದ್ದು ಮತ್ತೆ ಗೆಲುವಿನ ಟ್ರ್ಯಾಕ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಇನ್ನು ಫ್ಲಾಶ್ ಬ್ಯಾಕ್ ನಲ್ಲಿ ಬರುವ ಲಿನೇಟಾ ಪಾತ್ರ ಮನಮುಟ್ಟುವಂತದ್ದು & ಮುದ್ದಾದ ಪಾತ್ರ..

ಇನ್ನು ಈ ಚಿತ್ರದಲ್ಲಿ ಗ್ರೀಷ್ಮಾ ಶ್ರೀಧರ್ ಅವರು ಮೊದಲ ಬಾರಿಗೆ ಅಭಿನಯಿಸಿದ್ದಾರೆ.. ಆದರೆ ಎಲ್ಲೂ ಸಹ ಇದು ಅವರ ಮೊದಲ ಸಿನಿಮಾ ಅನ್ನೋ ಫೀಲ್ ಬರೋದೇ ಇಲ್ಲ ಅಷ್ಟರ ಮಟ್ಟಿಗೆ ಅಭಿನಯಿಸಿದ್ದಾರೆ ಗ್ರೀಷ್ಮಾ..

ಇನ್ನು ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ ಅವರು ಈ ಹಿಂದೆ ತುಳು ಚಿತ್ರ ಅಪ್ಪೆ ಟೀಚರ್ ನ ಮೂಲಕ ಬ್ಲಾಕ್ ಬಸ್ಟರ್ ನೀಡಿದ್ದರು. ಅದೇ ರೀತಿ ಅವರ ನಿರ್ದೇಶನದ ಮೊದಲ ಕನ್ನಡ ಚಿತ್ರ ಮಾಲ್ಗುಡಿ ಡೇಸ್ ನಲ್ಲೂ ಕೂಡ ಗೆಲುವಿನ ನಗೆ ಬೀರುವುದು ಪಕ್ಕಾ.

ಹಾಗೆಯೇ ಚಿತ್ರದ ಛಾಯಾಗ್ರಹಣ & ಸಂಗೀತ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಇಷ್ಟವಾಗುವ ಅಂಶಗಳು. ಇನ್ನುಳಿದ ಕಲಾವಿದರೂ ಸಹ ತುಂಬಾ ಅದ್ಬುತವಾಗಿ ಚಿತ್ರದಲ್ಲಿ ಅಭನಯಿಸಿದ್ದಾರೆ. ಒಟ್ಟಾರೆಯಾಗಿ ನಾರ್ಮಲ್ ಚಿತ್ರಗಳನ್ನು ನೋಡಿ ಬೇಸತ್ತಿರುವ ಪ್ರೇಕ್ಷಕರಿಗೆ ಮಾಲ್ಗುಡಿ ಡೇಸ್ ಫೀಲ್ ಗುಡ್ ಸಿನಿಮಾ ಆಗಲಿದೆ.

ನಮ್ಮ ರೇಟಿಂಗ್ 4/5

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.