ಧೀರ ಸಾಮ್ರಾಟ್ ಚಿತ್ರದ ಪ್ರಮುಖ ಪಾತ್ರದಲ್ಲಿ ಗಿರಿಧರ್ ಮಂಜುನಾಥ್..

ಧೂಮ ಚಿತ್ರದ ನಂತರ ನವಪ್ರತಿಭಾವಂತ ನಟ ಗಿರಿಧರ್ ಮಂಜುನಾಥ್ ಅವರು ಪ್ರಮುಖ ಪಾತ್ರವೊಂದರಲ್ಲಿ ಧೀರ ಸಾಮ್ರಾಟ್ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಟ್ಟುಮಸ್ತಾದ ದೇಹವನ್ನು ಹೊಂದಿರೋ ಗಿರಿಧರ್ ಮಂಜುನಾಥ್ ಅವರು ಧೀರ ಸಾಮ್ರಾಟ್ ಚಿತ್ರದಲ್ಲಿ ಅಭಿನಯಿಸಲು ಕಾರಣ ಚಿತ್ರದ ನಿರ್ದೇಶಕ ಪವನ್..

ಚಿತ್ರದ ಕಥೆ ಚೆನ್ನಾಗಿರುವ ಕಾರಣಕ್ಕೆ ನಟ ಗಿರಿಧರ್ ಮಂಜುನಾಥ್ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಧೀರ ಸಾಮ್ರ‍ಟ್ ಚಿತ್ರದಲ್ಲಿ ನಾಯಕನಾಗಿ ರಾಕೇಶ್ & ನಾಯಕಿಯಾಗಿ ಅದ್ವಿತಿ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಿದ್ದು , ಪ್ರಮುಖ ಪಾತ್ರದಲ್ಲಿ ಗಿರಿಧರ್ ನಟಿಸಲಿದ್ದಾರೆ.

ತನ್ವಿ ಪ್ರೊಡಕ್ಷನ್ಸ್ ಹೌಸ್ ನಲ್ಲಿ ತಯಾರಾಗ್ತಿರೋ ಈ ಸಿನಿಮಾಗೆ ಗುರು ಬಂಡಿ & ರವಿ ಚೌಹಾಣ್ ಬಂಡವಾಳ ಹೂಡಲಿದ್ದಾರೆ.. ಚಿತ್ರದ ಮುಹೂರ್ತ ಇದೇ ತಿಂಗಳು 30 ನೇ ತಾರೀಖಿಂದು ಜರುಗಲಿದ್ದು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ &ಇತರ ಗಣ್ಯ ವ್ಯಕ್ತಿಗಳು ಬರಲಿದ್ದಾರೆ.

ಇನ್ನು ಗಿರಿಧರ್ ಮಂಜುನಾಥ್ ಅಭಿನಯಿಸಿರುವ ಧೂಮ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೆಯುತ್ತಿದ್ದು ಅತೀ ಶೀಘ್ರದಲ್ಲೇ ಆಡಿಯೋ ಬಿಡುಗಡೆ ಆಗಲಿದೆ. ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡಿ ಬೆವರಿಳಿಸಿ ಭರ್ಜರಿ ಬಾಡಿಯೊಂದಿಗೆ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ.

ಇಷ್ಟೇ ಅಲ್ಲದೇ ಶಶಿ ಅವರ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದರಲ್ಲಿ ಗಿರಿಧರ್ ಅವರು ಅಭಿನಯಿಸಲಿದ್ದು ಇನ್ನೂ ಶೀರ್ಷಿಕೆ ಇಟ್ಟಿಲ್ಲ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.