ಕನ್ನಡ ಚಿತ್ರದ ಆಡಿಷನ್ ನಲ್ಲಿ ತಮಿಳಿನ ಕೂಗು.! ನಿರ್ದೇಶಕ ಶ್ರೀನಿ ಕೊಟ್ರು ಸಖತ್ ರಿಪ್ಲೇ..

ಶ್ರೀನಿವಾಸ ಕಲ್ಯಾಣ & ಬೀರ್ ಬಲ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಶ್ರೀನಿ ಅವರ ನಿರ್ದೇಶನದ ಮುಂದಿನ ಚಿತ್ರ ಓಲ್ಡ್ ಮಾಂಕ್. ಈ ಚಿತ್ರದ ಮೂಲಕ ಕನ್ನಡದ ಹೊಸ ಪ್ರತಿಭೆಗಳಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕಲ್ಪಿಸಲು ಕರ್ನಾಟಕದ ವಿವಿಧ ನಗರಗಳಲ್ಲಿ ಆಡಿಶನ್ ನಡೆಸಲಾಗುತ್ತಿದೆ.

ಇಂತಹ ಒಳ್ಳೆಯ ಉದ್ದೇಶದಿಂದ ಇಂದು ಮಂಗಳೂರಿನಲ್ಲಿ ನಡೆಸಲಾಗುತ್ತಿದ್ದ ಆಡಿಷನ್ ವೇಳೆ ವ್ಯಕ್ತಿಯೋರ್ವ ತಮಿಳಿನಲ್ಲಿ ಆಡಿಷನ್ ಮಾಡಲು ಮುಂದಾಗಿದ್ದಾನೆ. ಇದನ್ನು ಕಂಡ ನಿರ್ದೇಶಕ ಶ್ರೀನಿ ಅವರು ಕೆಂಡಾಮಂಡಲವಾಗಿ ಇದು ಕನ್ನಡ ಸಿನಿಮಾದ ಆಡಿಷನ್ ಕನ್ನಡದಲ್ಲೇ ಅಭಿನಯ ಮಾಡಿ ತೋರಿಸಿ ಎಂದಿದ್ದಾರೆ.

ಇದಕ್ಕೆ ಮರುತ್ತರ ನೀಡಿದ ಆತ ನಾನು ತಮಿಳು ಸಿನಿಮಾ ಜಾಸ್ತಿ ನೋಡ್ತೀನಿ ಹೀಗಾಗಿ ತಮಿಳಿನಲ್ಲೇ ಆಡಿಷನ್ ಕೊಡ್ತೀನಿ ಎಂದಿದ್ದಾನೆ. ಆತನ ಉದ್ಧಟತನಕ್ಕೆ ಬೇಸತ್ತ ನಿರ್ದೇಶಕ ಶ್ರೀನಿ ಅವರು ಹಾಗಾದ್ರೆ ತಮಿಳು ಸಿನಿಮಾ ಆಡಿಷನ್ ಅಟೆಂಡ್ ಮಾಡು ಎಂದು ಆತನನ್ನು ಹೊರಕಳುಸಿದರು..

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.