ರಾಜೀವನಾಗಿ ರೈತರ ಪರ ನಿಂತ ಮಯೂರ್ ಪಟೇಲ್

ಸ್ಲಂ ಎಂಬ ಚಿತ್ರದಲ್ಲಿ ನಟಿಸಿ ತದನಂತರ ಚಿತ್ರಗಳಿಂದ ದೂರ ಉಳಿದಿದ್ದ ಮಯೂರ್ ಪಟೇಲ್ ಅವರು ಇದೀಗ ಮತ್ತೆ ಚಂದನವನಕ್ಕೆ ಆಗಮಿಸಿದ್ದು ರಾಜೀವ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರೈತರ ಕುರಿತು & ಅವರ ಸಮಸ್ಯೆಗಳ ಕುರಿತು ಬಹಳ ಅಚ್ಚುಕಟ್ಟಾಗಿ ತೋರಿಸಲಾಗಿದೆ.

ರೈತರಿಂದ ತುಂಬಿದ ಊರು.. ಆ ಊರನ್ನ ದಿನೇದಿನೇ ರೈತರು ಬಿಟ್ಟು ಹೋಗಲು ಪ್ರಾರಂಭ ಮಾಡ್ತಾರೆ. ಜನರೆಲ್ಲಾ ಊರು ಬಿಟ್ಟು ಹೋಗೋದನ್ನು ನೋಡಿದ ಮಯೂರ್ ಪಟೇಲ್ ಅವರ ತಂದೆ ಸಾಲ ಮಾಡಿ ಅವರನ್ನು ಊರು ಬಿಡದಂತೆ ತಡೆದು ನೋಡಿಕೊಳ್ಳುತ್ತಾರೆ. ಹೀಗೆ ಮಾಡಿದ ಸಾಲ ತೀರಿಸಲಾಗದೇ ಮಯೂರ್ ತಂದೆ ಆತ್ಮಹತ್ಯೆಗೆ ಶರಣಾಗುತ್ತಾರೆ.

ತಂದೆ ಆತ್ಮಹತ್ಯೆಗೆ ಕಾರಣ ತಿಳಿದ ನಾಯಕ ಮಯೂರ್ ಪಟೇಲ್ ಅದೇ ಊರಿಗೆ ಬಂದು ಊರಜನರ ಗುಂಪು ಕಟ್ಟಿಕೊಂಡು ರೈತನಾಗುತ್ತಾರೆ. ಹೀಗೆ ಮಯೂರ್ ಅವರಿಗೆ ಯುವ ರೈತ ಪ್ರಶಸ್ತಿ ಕೂಡ ಲಭಿಸುತ್ತದೆ. ಹೀಗೆ ರೈತನಾಗಿ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದ ಮಯೂರ್ ಪಟೇಲ್ ಅವರ ಸಹೋದರರಿಂದಲೇ ಅವರಿಗೆ ವಿರೋಧ ಎದುರಾಗುತ್ತದೆ. ಚೆನ್ನಾಗಿಯೇ ಇದ್ದ ಸಹೋದರರು ಉಲ್ಟಾ ಹೊಡೆಯೋದ್ಯಾಕೆ? ಮಯೂರ್ ಆ ಊರನ್ನು ಸರಿ ಮಾಡ್ತಾರಾ ಅನ್ನೋ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ನೀವು ರಾಜೀವ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು.

ಈ ಚಿತ್ರವನ್ನು ಪ್ಲೈಯಿಂಗ್‌ ಕಿಂಗ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ.
ದೇಶದ ಬೆನ್ನೆಲುಬಾಗಿರುವ ರೈತನ ಕುರಿತ ಕಥೆ ಈ ಚಿತ್ರದಲ್ಲಿ ಇರಲಿದ್ದು,
ಮಯೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿಲ್‌ ಎಂಬುವವರು ಸಂಗೀತ ನೀಡಿದ್ದು, ಡಾ||ವಿ.ನಾಗೇಂದ್ರ ಪ್ರಸಾದ್ ಚಿತ್ರದ ಎಲ್ಲಾ ಹಾಡುಗಳಿಗೆ
ಸಾಹಿತ್ಯ ಬರೆದಿದ್ದಾರೆ. ಪೂರ್ಣಚಂದ್ರ ಬೈಕಾಡಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.