ಮತ್ತೆ ಒಂದಾಗುತ್ತಿದೆ ಎಲ್ಲಿದ್ದೆ ಇಲ್ಲಿತನಕ ಜೋಡಿ..

ಮತ್ತೆ ಒಂದಾಗುತ್ತಿದೆ ಎಲ್ಲಿದ್ದೆ ಇಲ್ಲಿತನಕ ಜೋಡಿ..

ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಗೆಲುವು ಸಾಧಿಸಿದ ಕೆಲವೊಂದಷ್ಟು ಚಿತ್ರಗಳ ಪೈಕಿ ಸೃಜನ್ ಅಭಿನಯದಮತ್ತು ತೇಜಸ್ವಿ ನಿರ್ದೇಶನದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಸಹ ಒಂದು. ಪಕ್ಕಾ ಲವ್ ಮತ್ತು ಕೌಟುಂಬಿಕ ಚಿತ್ರವಾಗಿದ್ದ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನು ಫ್ಯಾಮಿಲಿ ಆಡಿಯನ್ಸ್ ಒಪ್ಪಿಕೊಂಡಿದ್ದರು. ಇನ್ನು ಇದಾದ ಬೆನ್ನಲ್ಲೇ ಇದೀಗ ಸೃಜನ್ ಲೋಕೇಶ್ ಅವರು ಮುಂದಿನ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು ಮತ್ತೆ ತೇಜಸ್ವಿ ಅವರ ನಿರ್ದೇಶನವೇ ಈ ಚಿತ್ರಕ್ಕೂ ಸಹ ಇರಲಿದೆ.

ಒಬ್ಬ ನಟ ಒಂದು ನಿರ್ದೇಶಕನ ಜೊತೆ ಕೆಲಸ ಮಾಡಿದ ನಂತರ ಮುಂದಿನ ಚಿತ್ರಕ್ಕೂ ಸಹ ಅದೇ ನಿರ್ದೇಶಕರ ಜೊತೆ ಕೆಲಸ ಮಾಡುವುದು ತೀರಾ ಕಡಿಮೆ. ಆದರೆ ಸೃಜನ್ ಮತ್ತು ತೇಜಸ್ವಿ ಅವರ ವಿಷಯದಲ್ಲಿ ಅದು ಬೇರೆ ಎಲ್ಲಿದ್ದೆ ಇಲ್ಲಿತನಕ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದ್ದು ತಮ್ಮ ಮುಂದಿನ ಚಿತ್ರವನ್ನು ಆದಷ್ಟು ಬೇಗ ಅನೌನ್ಸ್ ಮಾಡಲಿದ್ದಾರೆ. ಇನ್ನು ಕಳೆದ ಬಾರಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಮಾಡಿದ್ದ ಸೃಜನ್ ಮತ್ತು ತೇಜಸ್ವಿ ಜೋಡಿ ಈ ಬಾರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಮಾಡಲು ರೆಡಿಯಾಗಿದೆ.

ಟಿವಿ ಪ್ರೇಕ್ಷಕರು ಮತ್ತು ಚಿತ್ರಮಂದಿರದ ಪ್ರೇಕ್ಷಕರು ಇಬ್ಬರನ್ನು ಸಹ ಈಗಾಗಲೇ ರಂಜಿಸಿ ಅನುಭವ ಇರುವ ಸೃಜನ್ ಮತ್ತು ತೇಜಸ್ವಿ ತಂಡ ಸಸ್ಪೆನ್ಸ್ ಥ್ರಿಲ್ಲರ್ ಮಾಡಿದರೆ ಹೇಗೆ ಇರುತ್ತದೆ ಎಂಬುದನ್ನು ನಾವು ಈಗಿಂದಲೇ ಊಹಿಸಿ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಇನ್ನು ಒಂದೆಡೆಯ ದಿನವನ್ನು ನೋಡಿ ಟೈಟಲ್ ಅನ್ನು ಈ ತಂಡ ಅನೌನ್ಸ್ ಮಾಡಲಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.