ಭರ್ಜರಿಯಾಗಿ ಬಂತು ರಾಬರ್ಟ್ ಮೋಷನ್ ಪೋಸ್ಟರ್

ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕ್ರಿಸ್ಮಸ್ ದಿನದಂದು ಹಬ್ಬ ಮಾಡಲು ಮತ್ತೊಂದು ಕಾರಣ ಸಿಕ್ಕಿದೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳ್ತಿರೋ ದೊಡ್ಡ ಬಜೆಟ್ ನಾ ಎಲ್ಲರೂ ಕಾತುರತೆಯಿಂದ ಕಾಯುತ್ತಿರೋ ಈ ಸಿನಿಮಾ ಸಾಕಷ್ಟು ಸದ್ದು ಮಾಡ್ತಿದ್ದು, ಸೂಪರ್ ಡೂಪರ್ ಹಿಟ್ ಕೊಡುವ ಮುನ್ಸೂಚನೆ ಕೊಟ್ಟಿರೋದಂತು ಗ್ಯಾರಂಟಿ.

ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ದರ್ಶನ್ ಗನ್ ಇಂಡ್ಕೊಂಡು ನಿಂತಿರೋದು ನೋಡಿದ್ರೆ ಹಾಲಿವುಡ್ ರೇಂಜ್ ನಲ್ಲಿ ಇದೆ. ಈ ಫಸ್ಟ್ ಪೋಸ್ಟ್ರ್ ನಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿರೋ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಹತ್ತರ ದಾಖಲೆ ಬರೆಯುತ್ತೆ ಅನ್ನೋದು ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿರೋ ಸುದ್ದಿ. ಯಜಮಾನ ಕುರುಕ್ಷೇತ್ರ ಒಡೆಯ ನಂತರ ಡಿ ಬಾಸ್ ಸಿನಿಮಾಕ್ಕೆ ಕಾಯುತ್ತಿರೋ ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸುತ್ತೆ ಅನ್ನೋ ಅಪಾರ ನಂಬಿಕೆ ಇದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.