RCB ನಂಬಿದ ವೇದಾಂತ್ ಕಥೆ..! ಸಾರ್ವಜನಿಕರಿಗೆ ವಿಮರ್ಶೆ..

ಈ ವಾರ ತೆರೆ ಕಂಡಿರುವ ಬರುವ ನಿರೀಕ್ಷಿತ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಬಿಡುಗಡೆಗೂ ಮುನ್ನ ಟ್ರೈಲರ್ ಮತ್ತು ಟೀಸರ್ಗಳಿಂದ ಸಾಕಷ್ಟು ಸದ್ದು ಮಾಡಿದ್ದ ಈ ಚಿತ್ರ ಹಾಡುಗಳಿಂದಲೂ ಸಹ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು. ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಉದ್ದನೆಯ ಶೀರ್ಷಿಕೆಯನ್ನು ಹೊತ್ತು ಥಿಯೇಟರ್ ಅಂಗಳಕ್ಕೆ ಕಾಲಿಟ್ಟಿರುವ ಈ ಚಿತ್ರ ಮನರಂಜನೆಯನ್ನು ಸಹ ಚಿತ್ರದುದ್ದಕ್ಕೂ ನೀಡಿದೆ.

ಗುಳ್ಟು ಅಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ನೀಡಿದ್ದ ತಂಡ ತಮ್ಮ ಎರಡನೇ ಚಿತ್ರವಾದ ಸಾರ್ವಜನಿಕರಿಗೆ ಸುವರ್ಣಾವಕಾಶ ಮೂಲಕವೂ ಸಹ ಬ್ಲಾಕ್ ಬಸ್ಟರ್ ನೀಡುವುದು ಪಕ್ಕಾ. ಹೆಂಡತಿಗಾಗಿ ಏನನ್ನಾದರೂ ಸಹ ತ್ಯಾಗ ಮಾಡಲು ರೆಡಿ ಇರುವ ಗಂಡ ಇಂತಹ ದಂಪತಿಗಳಿಗೆ ಮಗ ಕಥಾನಾಯಕ ವೇದು. ಇನ್ನು ವೇದು ಸಹ ಪ್ರೀತಿಯಲ್ಲಿ ಬೀಳುತ್ತಾನೆ. ಹೀಗೆ ಪ್ರೀತಿಯಲ್ಲಿ ಉಂಟಾಗುವ ಒಂದು ಸಮಸ್ಯೆಗೆ ಸಿಲುಕಿಕೊಳ್ಳುವ ವೇದು ಸಮಸ್ಯೆಯಿಂದ ಕೇವಲ ಒಂದು ದಿನದಲ್ಲಿ ಹೇಗೆ ಆಗುತ್ತಾನೆ ಎಂಬುದೇ ಚಿತ್ರದ ಕಥೆ. ಎಲ್ಲಾ ಚಿತ್ರಗಳಂತೆ ಇಲ್ಲಿ ಸಾಮಾನ್ಯ ಕಾರಣಕ್ಕೆ ಪ್ರೇಮಿಗಳ ನಡುವೆ ಸಮಸ್ಯೆ ಉಂಟಾಗುವುದಿಲ್ಲ , ಚಿತ್ರಕತೆಗೆ ಬೇಕಾದ ಒಂದು ನಿರ್ದಿಷ್ಟವಾದ ಕಾರಣಕ್ಕೆ ಹೀರೋ ಮತ್ತು ನಾಯಕಿ ನಡುವೆ ಸಮಸ್ಯೆ ಉಂಟಾಗಿ ಅದೇ ಸಿನಿಮಾಗೆ ಟರ್ನಿಂಗ್ ಪಾಯಿಂಟ್ ಆಗಲಿದೆ.

ಇನ್ನು ಈ ಸಮಸ್ಯೆಗೆ ಸಿಲುಕಿದ ವೇದಾಂತ್ ಒಂದು ಸಮಸ್ಯೆ ಬಗೆಹರಿಸಲು ಹೋಗಿ ಅದೇ ಯಾವ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾನೆ & ಅವುಗಳಿಂದ ಹೇಗೆ ಹೊರಬರುತ್ತಾನೆ? ಈ ನಡುವೆ ಬರುವ ಆರ್ ಸಿ ಬಿ ಗೂ ವೇದು ಗೂ ಏನು ಸಂಬಂಧ? ಇದೆಲ್ಲದರಲ್ಲೂ ಮನರಂಜನೆ ತುಂಬಿದೆ. ಚಿತ್ರದ ಮೊದಲಾರ್ಧ ಒಂದಷ್ಟು ಮನರಂಜನೆ ಜೊತೆಗೆ ಸಾಗುತ್ತದೆ. ದ್ವಿತೀಯಾರ್ಧ ಪ್ರೇಕ್ಷಕರಿಗೆ ಮನರಂಜನೆಯ ಬಾಡೂಟ ಬಡಿಸುತ್ತದೆ. ದ್ವಿತೀಯಾರ್ಧದಲ್ಲಿ ಬರುವ ಪ್ರತೀ ಪಾತ್ರ ಕೂಡ ನಗಿಸದೇ ಇರಲಾರದು. ಹಾಗೆಯೇ ದ್ವಿತೀಯಾರ್ಧದಲ್ಲಿ ಬರುವ ಒಂದೊಳ್ಳೆ ಸಂದೇಶ ನಾವು ನೀವೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದದ್ದು.

ಒಂದೊಳ್ಳೆ ಮನರಂಜನೆಯ ಚಿತ್ರವನ್ನು ನೀಡುವುದರಲ್ಲಿ ನಿರ್ದೇಶಕ ಅನೂಪ್ ರಾಮಸ್ವಾಮಿ ಗೆದ್ದಿದ್ದಾರೆ. ನಾಯಕನಾಗಿ ರಿಷಿ ಈ ಚಿತ್ರದಲ್ಲಿ ಹಿಂದಿನ ಚಿತ್ರಗಳಿಗಿಂತ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಸಖತ್ತಾಗಿ ಅಭಿನಯಿಸಿದ್ದಾರೆ. ನಾಯಕಿ ಧನ್ಯಾ ಬಾಲಕೃಷ್ಣ ಅವರೂ ಸಹ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ವಿಲನ್ ಪಾತ್ರದ ರಂಗಾಯಣ ರಘು , ಕಾಮಿಡಿಯನ್ ಶೀನು ಮಿತ್ರ & ಸಿದ್ ಹಾಗೂ ರಿಷಿ ತಂದೆಯಾಗಿ ದತ್ತಣ್ಣ ಅದ್ಭುತ ಅಭಿನಯ ಮಾಡಿದ್ದಾರೆ. ಚಿತ್ರದ ಹಾಡುಗಳೂ ಸಹ ಗುನುಗುವ ಹಾಗಿವೆ , ಅದರಲ್ಲೂ ಏನು ಸ್ವಾಮಿ ಮಾಡೋಣ ಎಲ್ಲರ ಫೇವರಿಟ್..

ಒಟ್ಟಾರೆಯಾಗಿ ಸಾರ್ವಜನಿಕರಿಗೆ ಸುವರ್ಣವಕಾಶ ಒಂದು ಕಂಪ್ಲೀಟ್ ಎಂಟರ್ ಟೈನರ್ ಆಗಿದ್ದು , ಎಲ್ಲೂ ಸಹ ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದೇ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಧಾರಾಳವಾಗಿ ಕುಟುಂಬ ಸಮೇತ ಕುಳಿತು ಚಿತ್ರವನ್ನು ಎಂಜಾಯ್ ಮಾಡಬಹುದು.

ನಮ್ಮ ರೇಟಿಂಗ್ 3.9/5

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.