ಸಲಗದ ಸಖತ್ ಚಿತ್ರಣದ ಹಿಂದಿನ ಟ್ಯಾಲೆಂಟ್ ಶಿವ ಸೇನಾ..

ಸಲಗ ಕನ್ನಡ ಚಲನಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಇದೇ ಮೊದಲ ಬಾರಿಗೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಡಬ್ಬಿಂಗ್ ನಡೆಯುತ್ತಿದೆ. ಸ್ವತಃ ದುನಿಯಾ ವಿಜಯ್ ಅವರೇ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಟಗರು ಕಾಕ್ರೋಚ್ ಸೇರಿದಂತೆ ಇನ್ನು ಮುಂತಾದ ಅತಿ ದೊಡ್ಡ ತಾರಾ ಬಳಗವೇ ಇದೆ.

ಇನ್ನು ನಿನ್ನೆಯಷ್ಟೇ ಈ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಅದು ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳನ್ನು ಪಡೆದುಕೊಂಡು ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೇಕಿಂಗ್ ವಿಡಿಯೋದಲ್ಲಿರುವ ಹಿನ್ನೆಲೆ ಸಂಗೀತ ಎಲ್ಲರಿಗೂ ಕಿಕ್ ನೀಡುತ್ತಿದ್ದರೆ , ಚಿತ್ರದ ಸಿನಿಮಾಟೋಗ್ರಫಿ ನೋಡುಗರ ಕಣ್ಣಿಗೆ ಹಬ್ಬ ಎನಿಸುವಂತಿದೆ. ಹೌದು ಸಲಗ ಚಿತ್ರದಲ್ಲಿನ ಪ್ರತಿಯೊಂದು ದೃಶ್ಯವನ್ನು ಸಹ ಛಾಯಾಗ್ರಾಹಕ ಶಿವ ಸೇನಾ ಅವರು ತುಂಬಾ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದು ಚಂದನವನದಲ್ಲಿ ಟ್ರೆಂಡ್ ಆಗುವುದು ಪಕ್ಕಾ.

ಹೇಳಿ ಕೇಳಿ ಸಲಗವೊಂದು ಮಾಸ್ ಓರಿಯೆಂಟೆಡ್ ಸಿನಿಮಾ ಮತ್ತು ಚಿತ್ರದುದ್ದಕ್ಕೂ ಲಾಂಗು ಮಚ್ಚುಗಳ ಹಾರಾಟ ಇದ್ದೇ ಇರುತ್ತದೆ. ಈ ರೀತಿಯ ಚಿತ್ರಗಳ ದೃಶ್ಯವನ್ನು ಸೆರೆ ಹಿಡಿಯಬೇಕೆಂದರೆ ತುಂಬಾ ಯೂನಿಕ್ ಆಗಿ ಸಿನಿಮಾಟೋಗ್ರಫಿ ಮಾಡಬೇಕಾಗುತ್ತದೆ..

ಇನ್ನು ಸಲಗ ಚಿತ್ರದಲ್ಲಿನ ಪ್ರತಿಯೊಂದು ದೃಶ್ಯವನ್ನು ವಿನೂತನ ಮತ್ತು ವಿಭಿನ್ನ ರೀತಿಯಲ್ಲಿ ಛಾಯಾಗ್ರಾಹಕ ಶಿವಸೇನಾ ಅವರು ಸೆರೆ ಹಿಡಿದಿದ್ದು ಚಿತ್ರದ ಮೇಕಿಂಗ್ ನೋಡಿದವರಿಗೆ ಅದು ತಿಳಿಯುತ್ತಿದೆ. ಇನ್ನು ಸಲಗ ಚಿತ್ರ ಬಿಡುಗಡೆಯಾದ ನಂತರ ಶಿವಸೇನಾ ಅವರು ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್ ಸಿನಿಮಾಟೋಗ್ರಫರ್ ಎನಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಎಲ್ಲರೂ ವ್ಯಕ್ತಪಡಿಸುತ್ತಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.