ಮೇಕಿಂಗ್ ನೋಡಿದ್ರೆ ಮತ್ತೊಂದು ಟಗರು ಆಗೋದು ಕಂಫರ್ಮ್

ಟಗರು ನಿರ್ಮಾಣ ಮಾಡಿದ್ದ ವೀನಸ್ ಎಂಟಟೈನರ್ಸ್ ಅವರ ಮತ್ತೊಂದು ಸಿನಿಮಾ ಸಲಗ ನಿರ್ಮಾಣ ಮಾಡಿದ್ದು, ಅದರ ಮೇಕಿಂಗ್ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮೇಕಿಂಗ್ ನೋಡಿದವರೆಲ್ಲಾ ಮತ್ತೊಂದು ಬ್ಲಾಕ್ ಬಸ್ಟರ್ ಟಗರು ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ ಅಂತಾವ್ರೆ.

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿ ನಾಯಕನಟನಾಗಿ ಅಭಿನಯಿಸಿರೋ ಸಲಗ ಮೇಕಿಂಗ್ ನಿಂದನೇ ಸಾಕಷ್ಟು ಭರವಸೆ ಹುಟ್ಟು ಹಾಕಿದ್ದು, ಟಗರು ತಾಂತ್ರಿಕ ತಂಡವೇ ಈ ಸಿನಿಮಾಕ್ಕೆ ಕೆಲಸ ಮಾಡಿರೋದು ಮತ್ತಷ್ಟು ಬಲ ಕೊಡುತ್ತಿದೆ. ಟಗರು ಡೈಲಾಗ್ ಬರೆದಿದ್ದ ಮಾಸ್ತಿ ಉಪ್ಪಾರಳ್ಳಿ ಈ ಸಿನಿಮಾಕ್ಕೂ ಡೈಲಾಗ್ ಬರೆದಿದ್ದು, ಮಾಸ್ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ದಕ್ಕಿಸಿಕೊಳ್ಳಲು ಮಾಸ್ತಿ ಡೈಲಾಗ್ ಬೇಜಾನ್ ಇರುತ್ತೆ. ಟಗರು ನಲ್ಲಿ ಕೆಲಸ ಮಾಡಿದ್ದ ಅಭಿ ಈ ಸಿನಿಮಾಕ್ಕೆ ಕೋ ಡೈರೆಕ್ಟರ್ ಆಗಿ ತುಂಬಾನೇ ಕೆಲ್ಸ ಮಾಡಿದ್ದು, ತಾಂತ್ರಿಕತೆಯಲ್ಲಿ ಮತ್ತಷ್ಟು ಕ್ವಾಲಿಟಿ ಕೊಡಲು ಸಹಾಯವಾಗಿದೆ. ಹಾಗೇನೆ ಮಾಸ್ ಗೆ ಹೆಸ್ರು ಮಾಡಿರೋ ಮ್ಯೂಸಿಕ್ ಕಂಪೋಸರ್ ಚರಣ್ ರಾಜ್ ಅವರಿಂದ ಮತ್ತಷ್ಟು ದೊಡ್ಡ ಮಟ್ಟದ ಹಾಡುಗಳು ಮತ್ತು ಹಿನ್ನಲೆ ಸಂಗೀತ ನಿರೀಕ್ಷೆ ಇದ್ದು, ಮೇಕಿಂಗ್ ವಿಡಿಯೋದಲ್ಲಿನ ಹಿನ್ನಲೆ ಸಂಗೀತ ಹುಚ್ಚು ಹಿಡಿಸೋದಂತೂ ಗ್ಯಾರಂಟಿ.
ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮತ್ತಷ್ಟು ತೂಕ ಕೊಟ್ಟಿದ್ದು, ಶಿವಸೇನಾ ಅವರ ಕ್ಯಾಮೆರಾ ವರ್ಕ್ ಕಮಾಲ್ ಮಾಡುತ್ತಿದೆ ಮೇಕಿಂಗ್ ನಲ್ಲಿ.

ಕೆಪಿ ಶ್ರೀಕಾಂತ್ ಬಂಡವಾಳ ಹೂಡಿರೋ ಈ ಸಲಗದ ತಾರಾಬಳಗದಲ್ಲಿ ದುನಿಯಾ ವಿಜಯ್ ಜೊತೆ ನಾಯಕಿಯಾಗಿ ಕೆಮಿಸ್ಟ್ರಿ ಆಫ್ ಕಾರಿಯಪ್ಪ ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದು, ಡಾಲಿ ಧನಂಜಯ್ ಖಡಕ್ ಪೋಲಿಸ್ ಆಫಿಸರ್ ಆಗಿ ಮಿಂಚಿದ್ದಾರೆ. ಹಾಗೇನೆ ಯಶವಂತ್ ಶೆಟ್ಟಿ, ಸುಧಿ (ಕಾಕ್ರೋಚ್) ಚಿತ್ರದಲ್ಲಿ ವಿಲನ್ ಗಳಾಗಿ ಮತ್ತೆ ಕಮಾಲ್ ಮಾಡುತಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.