ಓಲ್ಡ್ ಮಾಂಕ್ ಜೊತೆ ಬರ್ತಿದ್ದಾರೆ ಶ್ರೀನಿ

ಶ್ರೀನಿವಾಸ ಕಲ್ಯಾಣ ಬೀರಬಲ್ ಮೂಲಕ ಚಂದನವನದಲ್ಲಿ ನಿರ್ದೇಶಕ ಕಮ್ ನಟನಾಗಿ ಯಶಸ್ಸು ಕಂಡಿರೋ ಶ್ರೀನಿ ಇವಾಗ ಮತ್ತೊಮ್ಮೆ ಆಕ್ಷನ್ ಕಟ್ ಹೇಳುವುದರ ಜೊತೆ ನಾಯಕನಾಯಗಿಯೂ ಕಾಣಿಸಿಕೊಳ್ಳುತ್ತಿದ್ದು, ಆ ಸಿನಿಮಾ ಓಲ್ಡ್ ಮಾಂಕ್ ಎಂದು ಹೆಸರಿಟಿದ್ದಾರೆ. ಓಲ್ಡ್ ಮಾಂಕ್ ಅಂದಾಕ್ಷಣ ನೆನಪಾಗೋದು ಮಧ್ಯಪಾನದ ಬ್ರಾಂಡ್.

ಶ್ರೀನಿ ಈ ಸಿನಿಮಾಕ್ಕೆ ಟೈಟಲ್ ಇಟ್ಟಿರೋದು ಈ ಓಲ್ಡ್ ಮಾಂಕ್ ನ ಕನ್ನಡ ಅರ್ಥ ಹಳೆ ಸನ್ಯಾನಿ ಅನ್ನೋ ಪದಕ್ಕೆ. ಈ ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಗೆ ನಾಯಕಿಯ ಹುಡುಕಾಟ ಸಹ ನಡೆಯುತಿದ್ದು, ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲು ತಯಾರಾಗುತಿದ್ದಾರೆ ಶ್ರೀನಿ. ಜನವರಿಯಿಂದ ಶುರುವಾಗಲಿರೋ ಈ ಸಿನಿಮಾಕ್ಕೆ ಶ್ರೀಶಾ ಕುಡುವಳ್ಳಿ ಕ್ಯಾಮೆರಾ ಮಾಡುತಿದ್ದು, ಸೌರಭ್ ಸಂಗೀತ ನೀಡುತಿದ್ದಾರೆ. ನಿರ್ದೇಶಕನ ಚಿತ್ರಕಥೆಗೆ ಸಂತೋಷ್ ನಂದಕುಮಾರ್ ಮತ್ತು ಪ್ರಸನ್ನ ಸಾಥ್ ಕೊಡಲಿದ್ದಾರೆ. ಇತ್ತೀಚಿಗೆ ರಂಗನಾಯಕಿಯಲ್ಲಿ ಮುಖ್ಯಪಾತ್ರಧಾರಿಯಾಗಿ ಸದ್ದು ಮಾಡಿದ್ದ ಶ್ರೀನಿ ಈ ಸಿನಿಮಾ ಮೂಲಕ ಮತ್ತೊಮ್ಮೆ ಛಾಪು ಮೂಡಿಸಲು ಸಜ್ಜಾಗುತಿದ್ದಾರೆ. ಇಡೀ ತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.