ಸಲಗ ಸವಾರಿಗೆ ಮೊದಲ ಹೆಜ್ಜೆ: ಡಿ. 18ಕ್ಕೆ ಮೇಕಿಂಗ್ ವಿಡಿಯೋ

ದುನಿಯಾ ವಿಜಯ್ ನಾಯಕ ನಟನಾಗಿ ಅವರೇ ಆಕ್ಷನ್ ಕಟ್ ಹೇಳುತ್ತಿರೋ ಬಹುನಿರೀಕ್ಷಿತ ಸಲಗ ಚಿತ್ರ ಇದೇ ಡಿಸೆಂಬರ್ 18 ಕ್ಕೆ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲು ಸಜ್ಜಾಗಿದೆ. ಟೈಟಲ್ ಘೋಷಣೆಯಾದಗಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗ್ತಿರೋ ಸಲಗ ತಂಡ, ಸಾಕಷ್ಟು ಕುತೂಹಲ ಕೆರಳಿಸಿದೆ.

ಟಗರು ನಿರ್ಮಾಪಕರಾದ ಕೆಪಿ ಶ್ರೀಕಾಂತ್ ಅವರು ಬಂಡವಾಳ ಹೂಡಿದ್ದು, ಸಿನಿಮಾವನ್ನು ಅದ್ಧೂರಿಯಾಗಿಯೇ ನಿರ್ಮಿಸುತಿದ್ದಾರೆ. ಪಕ್ಕಾ ಮಾಸ್ ಎಂಟ್ರಟೈನ್ಮೆಂಟ್ ಇರೋ ಈ ಸಿನಿಮಾಗಲ್ಲಿ ಹಲವಾರು ವಿಶೇಷತೆಗಳಿದ್ದು, ಮೊದಲ ಬಾರಿಗೆ ಡಾಲಿ ಧನಂಜಯ್ ಮತ್ತು ದುನಿಯಾ ವಿಜಯಾ ಎದುರಾಗುತಿದ್ದಾರೆ. ಕಳೆದ ವರ್ಷದ ಸೂಪರ್ ಡೂಪರ್ ಹಿಟ್ ಸಿನಿಮಾಕ್ಕೆ ಕೆಲಸ ಮಾಡಿದ ಅನೇಕ ತಂತ್ರಜ್ಞರೇ ಕೆಲಸ ಮಾಡುತಿದ್ದಾರೆ. ಟಗರು ಟೀಮ್ ನ ಮಾಸ್ತಿ ಡೈಲಾಗ್ ಬರೆದರೆ, ಚರಣ್ ರಾಜ್ ಮತ್ತೆ ಮ್ಯೂಸಿಕ್ ಮಾಡಿದ್ದಾರೆ.

ಈ ಸಿನಿಮಾದ ಮತ್ತೊಂದು ವಿಷ್ಯ ಅಂದ್ರೆ, ಸಿನಿಮಾದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು, ಎ2 ಆಡಿಯೋ ಕಂಪನಿ ಹಕ್ಕನ್ನು ಪಡೆದಿದೆ. ಎ2 ಆಡಿಯೋ ಹೊಸದೇನಲ್ಲ, ಜೋಗಿ ನಿರ್ಮಾಪಕರಾದ ಕೃಷ್ಣ ಪ್ರಸಾದ್ ಅವರ ಅಶ್ವಿನಿ ಆಡಿಯೋ ಮರುಹೆಸರು ಇದು. ಬಹಳ ವರ್ಷಗಳ ನಂತರ ಮರಳಿರೋ ಎ2 ಆಡಿಯೋ ಕಂಪನಿಗೆ ಸಲಗದ ಹಾಡುಗಳು ಸೇಲಾಗಿರೋದು ಸಲಗ ತಂಡದರಲ್ಲಿ ಖುಷಿಯಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.