ರಾಜ್ ಶೇಖರ್ ಡೈಲಾಗ್ಸ್’ಗೆ ಡಿ ಬಾಸ್ ಫಿದಾ

ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿದ್ದು, ಅಭಿಮಾನಿಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಫಸ್ಟ್ ಲುಕ್ ನಿಂದ ಸಾಕಷ್ಟು ಸುದ್ದಿಯಾಗಿ ಈ ಡೈಲಾಗ್ ಒಂದು ಸಾಕಷ್ಟು ಚರ್ಚೆಯಲ್ಲಿತ್ತು.

“ಈ ಕೈ ಗೆ ಶಬರಿ ಮುಂದೆ ಸೋಲೋದು ಗೊತ್ತು ರಾವಣನ ಮುಂದೆ ಗೆಲ್ಲೋದು ಗೊತ್ತು” ಈ ಡೈಲಾಗ್ ಪೋಸ್ಟರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ತುಂಬ ವೈರಲ್ ಆಗಿತ್ತು. ಈ ಡೈಲಾಗ್ ಬರೆದವರು ಇವಾಗ ಸುದ್ದಿಯಲ್ಲಿರೋದು ಖುಷಿಯ ಸಂಗತಿ. ಹೌದು, ರಾಬರ್ಟ್ ಪೋಸ್ಟರ್ ನಲ್ಲಿರೋ ಡೈಲಾಗ್ ಬರೆದವರು ರಾಜಶೇಖರ್. ಸಿನಿಮಾ ಸಂಭಾಷಣೆಗೆ ಡಿ ಬಾಸ್ ಫುಲ್ ಖುಷಿಯಾಗಿದ್ದು, ಮುಕ್ತ ಕಂಠದಿಂದ ಶಬ್ಬಾಶ್ ಗಿರಿ ಹೇಳಿದ್ದಾರೆ.

ಮೊದಲು ಸುಮಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿ, ಆಮೇಲೆ ಬರವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರೀತಿ ಆಶ್ಚರ್ಯಕರ.
ಮಜಾ ಟಾಕೀಸ್ ಫರ್ಸ್ಟ್ ಸೀಜನ್ 200 ಎಪಿಸೋಡ್ಸ್ ಸ್ಕ್ರಿಪ್ಟ್ ಬರೆದು, ಮತ್ತೇ ಅದರಲ್ಲಿ ನಟನೆ ಕೂಡ ಮಾಡಿ ಕರ್ನಾಟಕ ಜನರ ಮನಸ್ಸಲ್ಲಿ ಮನೆ ಮಾಡಿದ್ದಾರೆ ಈ ಕಲಾವಿದ. ಆಮೇಲೆ ಸಿನಿಮಾಗಳಲ್ಲಿ ರೈಟರ್ ಆಗಿ ಬ್ಯೂಸಿ ಆದ ರಾಜಶೇಖರ್, “ವಿಕ್ಟರಿ-2” “ಅಮ್ಮ ಐ ಲವ್ ಯು” ಗೆ ಡೈಲಾಗ್ಸ್ ಬರದಿದ್ದು, ಎರಡು 50ಡೇಸ್ ಹಿಟ್ ಮೂವೀಸ್ ಆಗಿದ್ದು ರಾಜಶೇಖರ್ ಅವರಲ್ಲಿ ಬರವಣಿಗೆಗೆ ಮತ್ತಷ್ಟು ಹುಮ್ಮುಸ್ಸು ಬಂದಿದ್ದಂತೂ ನಿಜ.
ಈಗ ರಾಬರ್ಟ್ ಗೆ ಡೈಲಾಗ್ಸ್ ಬರಿತಾ ಜೊತೆಗೆ
“ಬಿಲ್ ಗೇಟ್ಸ್”(ಚಿಕ್ಕಣ್ಣ), “ರಾಕ್ಷಸರು”(ಸಾಯಿ ಕುಮಾರ್), “ವರ್ಜಿನ್”(ಮದರಂಗಿ ಕೃಷ್ಣ), “ಯುವಕೇಸರಿ”
(ವಿನಯ್ ರಾಜಕುಮಾರ್) ಸಿನಿಮಾಗಳಿಗೆ ಡೈಲಾಗ್ಸ್ ಬರಿತಾ ಇದ್ದಾರೆ.

ಒಂದು ಸಿನಿಮಾ ಗೆಲ್ಲಬೇಕಾದ್ರೆ ಆ ಸಿನಿಮಾದ ಬರವಣಿಗೆ ತುಂಬಾನೇ ದೊಡ್ಡ ಪಾತ್ರವಹಿಸುತ್ತೆ. ಹಾಗೇಯೆ ಗೆದ್ದಿರೋ ಸಿನಿಮಾಗಳೆಲ್ಲಾ ಬರವಣಿಗೆಯಲ್ಲಿ ಒಂದು ತೂಕ ಜಾಸ್ತಿನೇ ಇರುತ್ತೆ ನೋಡಿರಬಹುದು. ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಬರಹಗಾರರಲ್ಲೊಬ್ಬರಾದ ರಾಜಶೇಖರ್ ಅವರಿಗೆ ನಮ್ ಕಡೆಯಿಂದ ಶುಭಹಾರೈಕೆ ಮತ್ತು ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂಬುದೇ ನಮ್ ಆಶಯ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.