ನೈಜ ಲವ್ ಸ್ಟೋರಿ “ಮೆಹಬೂಬ್” ಗೆ ಮಹೂರ್ತ

ಚಂದನವನದ ಹೊಸತನದ ಹಿಟ್ ಸಿನಿಮಾಗಳಾದ ಬ್ಯೂಟಿಫುಲ್ ಮನಸುಗಳು ಮತ್ತು ನೀರುದೋಸೆ ನಿರ್ಮಾಪಕರಿಂದ ಮತ್ತೊಂದು ಹೊಸತನದ ಕಂಟೆಂಟ್ ಇರೋ ಸಿನಿಮಾ ತಯಾರಾಗುತಿದ್ದು, ಇಂದು ವಿಜಯನಗರದ ಮಾರುತಿ ಮಂದಿರದಲ್ಲಿ ಮಹೂರ್ತ ಆಚರಿಸಿಕೊಂಡಿದೆ. ಕಥಾವಿಚಿತ್ರ ಎಂಬ ಪ್ರಾಯೋಗಿಕ ಕಥೆಗೆ ಆಕ್ಷನ್ ಕಟ್ ಹೇಳಿದ್ದ ಅನೂಪ್ ಅಂಟೋನಿಯವರೇ ಈ ಸಿನಿಮಾ ನಿರ್ದೇಶನ ಮಾಡುತಿದ್ದು, ಬಿಗ್ ಬಾಸ್ ಖ್ಯಾತಿಯ ಶಶಿ ಮತ್ತು ಗೊಂಬೆಗಳ ಲವ್ ಖ್ಯಾತಿಯ ಪಾವನ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸುತಿದ್ದಾರೆ.

2015 ಕೇರಳದಲ್ಲಿ ನಡೆದ ನೈಜ ಘಟನೆಯನ್ನು ತಂಬಾನೇ ಅಧ್ಯಯನ ಮಾಡಿ ಅದನ್ನ ಚಿತ್ರಕಥೆಯಾಗಿ ಸ್ಕ್ರೀನ್ ಮೇಲೆ ತರುವ ಕೆಲಸ ಮಾಡುತ್ತಿರೋ ಅನೂಪ್ ಅವರಿಗೆ ಇದು ಎರಡನೇ ಸಿನಿಮಾವಾಗಿದ್ದು, ಇವರ ಜೊತೆ ಕಥಾವಿಚಿತ್ರಕ್ಕೆ ಸಂಗೀತ ನೀಡಿದ್ದ ಮ್ಯಾಥ್ಯೂ ಮನು ಅವರು ಸಹ ಈ ಸಿನಿಮಾಕ್ಕೂ ಸಂಗೀತ ನೀಡುತಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು ,ಕಂಪೋಸಿಂಗ್ ಪ್ರಾರಂಭವಾಗಿದೆ. ಎರಡು ಧರ್ಮಗಳು ಪ್ರೀತಿ ವಿಚಾರದಲ್ಲಿ ಅಡ್ಡ ಬರುತ್ತಾ ಅಥವಾ ಅದರ ವಾಸ್ತವತೆ ಏನು ಅನ್ನೋದನ್ನ ಹೇಳುವುದಕ್ಕೆ ಹೊರಟಿದೆ ಚಿತ್ರತಂಡ.

ಹಿಂದೂ ಹುಡುಗ ಕಾರ್ತಿಕ್ ಗೌಡ ಪಾತ್ರಧಾರಿಯಾಗಿ ಶಶಿ, ನಾಜಿರಿಯಾ ಭಾನು ಮುಸ್ಲಿಂ ಹುಡುಗಿ ಪಾತ್ರಧಾರಿಯಾಗಿ ಪಾವನ, ಹಿರೋಯಿನ್ ಅಣ್ಣ ಅಲ್ತಾಫ್ ಪಾತ್ರಧಾರಿಯಾಗಿ ಸಂದೀಪ್,ಕಿರಿಕ್ ಪಾರ್ಟಿ ಖ್ಯಾತಿಯ ಸಲ್ಮಾನ್, ಬಿಗ್ ಬಾಸ್ ಧನರಾಜ್, ಬುಲೆಟ್ ಪ್ರಕಾಶ್, ಜೈಜಗದೀಶ್, ಕಲ್ಯಾಣಿ ರಾವ್, ಕಬೀರ್ ಸಿಂಗ್ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದು, ತಂಬಾನೇ ದೊಡ್ಡ ತಾರಾಬಳಗ ಹೊಂದಿದೆ.

ಪ್ರಸನ್ನ ಶ್ರೀನಿವಾಸ್ ಬಂಡವಾಳ ಹೂಡಿರೋ ಈ ಸಿನಿಮಾಕ್ಕೆ ಕಿರಣ್ ಹಂಪಾಪುರ ಕ್ಯಾಮೆರಾ ವರ್ಕ್ ಮಾಡುತಿದ್ದು, ಕೆ ಎಂ ಪ್ರಕಾಶ್ ಸಂಕಲನ ಮಾಡುತಿದ್ದಾರೆ. ನಾಳೆಯಿಂದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಪ್ರಾರಂಭವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು, 38 ದಿನ ಶೂಟಿಂಗ್ ಫ್ಲಾನ್ ಮಾಡಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.