ಬಹು ನಿರೀಕ್ಷಿತ “ಮಾಲ್ಗುಡಿ ಡೇಸ್” ಪೋಸ್ಟರ್ ವೈರಲ್

ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಮಾಲ್ಗುಡಿ ಡೇಸ್ ಸಿನಿಮಾ ಮೋಷನ್ ಪೋಸ್ಟರ್ ನಂತರ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದು, ಜನವರಿ 2020 ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.

ತುಳು ಸೂಪರ್ ಹಿಟ್ ಸಿನಿಮಾ ಅಪ್ಪೇ ಟೀಚರ್ ಚಿತ್ರದ ನಿರ್ದೆಶಕ ಕಿಶೋರ್ ಮೂಡಬಿದ್ರೆ ಅವರು ಆಕ್ಷನ್ ಕಟ್ ಹೇಳಿರೋ ಈ ಸಿನಿಮಾ ವಿಜಯ ರಾಘವೇಂದ್ರ ಅವರ ಲುಕ್’ನಿಂದನೇ ಸಾಕಷ್ಟು ಸದ್ದು ಮಾಡ್ತಿದ್ದು, ತುಂಬಾನೇ ಕುತೂಹಲ ಮೂಡಿಸುತ್ತಿದೆ. ಗ್ರೀಷ್ಮಾ ಶ್ರೀಧರ್ ನಾಯಕಿಯಾಗಿ ಅಭಿನಯಿಸಿದ್ದು, ಮೊದಲ ಬಾರಿಗೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಉದಯ್ ಲೀಲಾ ಕ್ಯಾಮೆರಾ ವರ್ಕ್ ಚಿತ್ರಕ್ಕಿದ್ದು, ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಸ್ವಯಂ ಪ್ರಭಾ ಎಂಟ್ರಟೈನ್ಮೆಂಟ್ ಮತ್ತು ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ಈ ಸಿನಿಮಾಕ್ಕೆ ರತ್ನಾಕರ್ ಕಾಮತ್ ಬಂಡವಾಳ ಹೂಡಿದ್ದಾರೆ. ಜನವರಿಯಲ್ಲಿ ಬಿಡುಗಡೆಯಾಗುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಈ ಸಿನಿಮಾ ಮುಂಚೂಣಿಯಲ್ಲಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.