ಬ್ರಹ್ಮ, ಐ ಲವ್ ಯೂ ಸಿನಿಮಾಗಳ ನಂತರ ಆ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನಲ್ಲಿ ದೊಡ್ಡ ಮಟ್ಟದಲ್ಲಿ 7 ಭಾಷೆಗಳಲ್ಲಿ ಸಿನಿಮಾ ಕಬ್ಜ ಎಂಬ ರೆಡಿಯಾಗುತ್ತಿದ್ದು, ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಮಹೂರ್ತ ನೆರವೇರಿತು.
ಚಿತ್ರಕ್ಕೆ ಶುಭ ಹಾರೈಸಿಲು ಬಂದ ಹ್ಯಾಟ್ರಿಕ್ ಹಿರೋ ಶಿವಣ್ಣ, ಚಿತ್ರಕ್ಕೆ ಕ್ಲಾಪ್ ಮಾಡಿ ಸಿನಿಮಾ ತಂಡಕ್ಕೆ ಶುಭಕೋರಿದರು. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ತೆರಳಲಿರೋ ಸಿನಿಮಾ ತಂಡ, ನಾಲ್ಕು ಹಂತದಲ್ಲಿ ಚಿತ್ರೀಕರಣ ಮಾಡುತ್ತಿದೆ. ನಾಯಕಿಯಾಗಿ ಕಾಜಲ್ ಫೈನಲ್ ಆಗಿದ್ದು, ಕೊನೆ ಹಂತದ ಮಾತುಕತೆ ಆಗಬೇಕಿದೆ. ಇನ್ನುಳಿದಂತೆ ಪಾತ್ರವರ್ಗದ ಬಗ್ಗೆ ಗುಟ್ಟು ಬಿಟ್ಟುಕೊಡದ ಚಿತ್ರತಂಡ, 2020 ಕ್ಕೆ ಸಿನಿಮಾ ರೆಡಿ ಮಾಡಿ ನಿಮ್ಮತ್ರ ಶಬ್ಬಾಶ್ ಗಿರಿ ತಗೊಳ್ತೀವಿ ಅನ್ನೋ ಭರವಸೆ ಕೊಟ್ಟಿದ್ದಾರೆ.
ಬೆಂಗಳೂರು, ಮೈಸೂರು, ವಾರಣಾಸಿ, ಮುಂಬೈ ಹೀಗೆ ಸಾಕಷ್ಟು ಲೋಕೆಷನ್ ಗಳಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿರುವುದರಿಂದ 15 ದಿನ ಮಾತ್ರ ಚಿತ್ರೀಕರಣ ಮಾಡಿ ಮತ್ತೆ 15 ದಿನ ತಯಾರಿ ಫ್ಲಾನ್ ಮಾಡಿ ಚಿತ್ರೀಕರಿಸಲಾಗುವುದು ಎಂಬುದು ನಿರ್ದೇಶಕ ಆರ್ ಚಂದ್ರು ಅವರ ಮಾತು.
Add comment