ಮತ್ತೆ ಕನ್ನಡಕ್ಕೆ ಬಂದ್ರು ಶರತ್ ಕುಮಾರ್.!

ಶರತ್ ಕುಮಾರ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ನಟ.‍ ಈ ಹಿಂದೆ ರಾಜಕುಮಾರ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ತಂದೆಯ ಪಾತ್ರದಲ್ಲಿ ಶರತ್ ಕುಮಾರ್ ಅವರು ಅಭಿನಯಿಸಿದ್ದರು. ರಾಜಕುಮಾರ ಚಿತ್ರದಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ಶರತ್ ಕುಮಾರ್ ಅವರು ಇದೀಗ ಮತ್ತೊಮ್ಮೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಪವನ್ ಒಡೆಯರ್ ಅವರ ನಿರ್ದೇಶನದ ಮುಂದಿನ ಚಿತ್ರ ರೆಮೋ ದಲ್ಲಿ ಶರತ್ ಕುಮಾರ್ ಅವರು ಕಾಣಿಸಿಕೊಳ್ಳಲಿದ್ದು ಆ ಚಿತ್ರದ ಅವರ ಲುಕ್ ರಿವೀಲ್ ಆಗಿದೆ.

ಸೂಟು ಬೂಟು ಧರಿಸಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಶರತ್ ಕುಮಾರ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಇಲ್ಲಿಯೂ ಸಹ ರಾಜಕುಮಾರ ದಂತೆಯೇ ನಾಯಕ ನಟನ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದಲ್ಲಿ ಇಶಾನ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದರೆ ಆಶಿಕಾ ರಂಗನಾಥ್ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಮತ್ತು ದಿ ವಿಲನ್ ಚಿತ್ರದ ನಿರ್ಮಾಪಕರಾದ ಸಿಆರ್ ಮನೋಹರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.