ಶಿವಸೈನ್ಯ ಕಡೆಯಿಂದ “ಆಯುಷ್ಮಾನ್ ಭವ” ಸವಿನೆನಪಿಗೆ ವಿಶೇಷ ಪೋಸ್ಟರ್.

ಪ್ರತಿಯೊಬ್ಬ ಸ್ಟಾರ್ ನಟನಿಗೂ ಸಾವಿರಾರು ಸಂಘಗಳು ಸಂಘಟನೆಗಳು ಸಾಕಷ್ಟು ಇರುತ್ತವೆ. ಆಯಾ ಸಂಘಟನೆಗಳು ತಮ್ಮದೇ ಶೈಲಿಯಲ್ಲಿ ತಮ್ಮ ನೆಚ್ಚಿನ ನಟನ ವಿಶೇಷ ದಿನಗಳನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುತ್ತಾರೆ. ಆದರೆ ಇಲ್ಲೊದು ಅಭಿಮಾನಿ ತಂಡ ಪ್ರತಿಯೊಂದು ಬಾರಿಯೂ ಸಹ ವಿಶೇಷತೆಗಳಲ್ಲಿ ವಿಶೇಷವಾಗಿ ತನ್ನ ನಟನ ವ್ಯಕ್ತಿತ್ವಕ್ಕೆ ಪೂರಕವಾಗಿ ಕೆಲಸ ಮಾಡುತ್ತಾ ಇರುತ್ತೆ. ಹೌದು, ಹ್ಯಾಟ್ರಿಕ್ ಹಿರೋ, ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಸಂಘವಾದ ಶಿವಸೈನ್ಯ ಅವರು ಪ್ರತಿಬಾರಿಯೂ ಶಿವಣ್ಣ ಅವರ ವ್ಯಕ್ತಿತ್ವಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಾ, ಶಿವಣ್ಣ ಅವರೇ ಶಬ್ಬಾಶ್ ಗಿರಿ ಹೇಳುವಂತೆ ಕೆಲಸ ಮಾಡುತ್ತಾ ಬಂದಿದ್ದಾರೆ. ಕೊಡಗು ಪ್ರವಾಹ ಆದಾಗ ಸಹಾಯಕ್ಕೆ ಮುಂದೆ ಬರುತ್ತಾರೆ, ಕವಚ ಸಿನಿಮಾ ಬಿಡುಗಡೆ ಸಮಯದಲ್ಲಿ ಉಚಿನ ಕಣ್ಣಿನ ಪರೀಕ್ಷೆ, ನೇತ್ರದಾನ ಶಿಬಿರ ಹೀಗೆ ಸಾಕಷ್ಟು ಹೆಮ್ಮೆಪಡುವ ಕಾರ್ಯ ಮಾಡುತ್ತಾ ತಮ್ಮ ನೆಚ್ಚಿನ ನಟನಿಗೂ ತಮ್ಮ ಸಂಘದ ಬಗ್ಗೆ ಹೆಮ್ಮೆ ಪಡುವಂತ ಕೆಲ್ಸ ಮಾಡುತ್ತಿದ್ದಾರೆ.

ಆಯುಷ್ಮಾನ್ ಭವ ಸಿನಿಮಾ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಇದರ ಸವಿನೆನಪಿಗಾಗಿ ಶಿವಣ್ಣ ಅವರ ಸಿನಿ ಜರ್ನಿಯ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ್ದು, ಅದನ್ನು ಶಿವಣ್ಣ ಅವರಿಗೇನೆ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾರೆ. ವಿಶೇಷ ಏನಂದರೆ ಈ ಪೋಸ್ಟರ್ ಬಿಡುಗಡೆ ಮಾಡಿದ್ದು ಕುತೂಹಲದ ಸಂಗತಿ.

ಫೇಸ್ಬುಕ್ ಮೂಲಕ ಶಿವಣ್ಣ ಆಪ್ತರು ಮತ್ತು ನಿರ್ಮಾಪಕರಾದ ಶ್ರೀಕಾಂತ್ ಅವರು, ಟ್ವಿಟ್ಟರ್ ಮೂಲಕ ಚಂದನವನದ ರಂಗನಾಯಕಿ ಅದಿತಿ ಪ್ರಭುದೇವ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎರಡರಲ್ಲೂ ಧೀರೆನ್ ರಾಮ್ ಕುಮಾರ್ ಮತ್ತು ಯುವ ರಾಜ್ ಕುಮಾರ್ ಅವರು, ಆ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.


https://m.facebook.com/story.php?story_fbid=3037041509646181&id=100000210851715

ಪೋಸ್ಟರ್ ನಲ್ಲಿ ಶಿವಣ್ಣ ಅವರ ಮೊದಲ ಸಿನಿಮಾದಿಂದ ಈ ಆಯುಷ್ಮಾನ್ ಭವ ತನಕ ಎಲ್ಲಾ ಚಿತ್ರಗಳ ಸಂಪೂರ್ಣ ವಿವರ ಮತ್ತು ಅವರ ದಾಖಲೆಗಳು, ಪ್ರಶಸ್ತಿಗಳು, ಅವರ ಕುಟುಂಬದ ವಿವರಗಳು ಹೀಗೆ ಎಲ್ಲವನ್ನೂ ವಿಶೇಷ ರೀತಿಯಲ್ಲಿ ಪೋಸ್ಟರ್ ಮೂಲಕ ಹೇಳಿರೋದು ಖುಷಿಯ ಸಂಗತಿ. ಈ ಪೋಸ್ಟರನ್ನು ಫ್ರೇಮ್ ಮಾಡ್ಸಿ ಶಿವಣ್ಣ ಅವರಿಗೇನೆ ಕೊಟ್ಟಿದ್ದು ತಂಡದಲ್ಲಿ ಮತ್ತಷ್ಟು ಖುಷಿ ಇದೆ. ಎಲ್ಲಾ ಅಭಿಮಾನಿ ತಂಡಗಳಿಗಿಂತಲೂ ವಿಭಿನ್ನವಾಗಿ ನಿಲ್ಲುವ ಶಿವಸೈನ್ಯದ ಮುಂದಿನ ಕೆಲಸಗಳಿಗೆ ಶುಭವಾಗಲಿ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.