ಕನ್ನಡ ಭಾಷೆ ಕಲಿಸದ ಶಾಲೆಗಳ ಮಾನ್ಯತೆ ರದ್ದುಗೊಳಿಸುತ್ತೇವೆ: ಸಚಿವ ಸುರೇಶ್ ಕುಮಾರ್

ಮೂರು ತಿಂಗಳಿಗೊಮ್ಮೆ ಉನ್ನತ ಪರಿಶೀಲನಾ ಸಮಿತಿ ನೇತೃತ್ವದಲ್ಲಿ ಸಭೆ ಸೇರಲಾಗುವುದು. ಶಾಲೆಗಳಲ್ಲಿ ಕನ್ನಡ ಕಲಿಕೆ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದ್ಧಾರೆ.

ಕನ್ನಡ ಕಲಿಕಾ ಕಾಯ್ದೆಯ ಅನ್ವಯ ಕನ್ನಡ ಭಾಷೆ ಕಲಿಸದ ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು. ಶೇ. 90ರಷ್ಟು ಸಿಬಿಎಸ್​ಸಿ, ಐಸಿಎಸ್​ಇ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿಲ್ಲ. ಇಷ್ಟೂ ಶಾಲೆಗಳ ಮಾನ್ಯತೆ ರದ್ದು ಮಾಡುವ ನೋಟೀಸನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದವರು ತಿಳಿಸಿದರು.

2017ರಲ್ಲಿ ಕನ್ನಡ ಕಲಿಕಾ ಕಾಯ್ದೆ ಜಾರಿಗೆ ಬಂದಿದೆ. ಎಲ್ಲಾ ಶಾಲೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಕಲಿಸಬೇಕೆಂಬುದು ಈ ಕಾಯ್ದೆಯ ಧ್ಯೇಯೋದ್ದೇಶವಾಗಿದೆ. ಈ ಕಾಯ್ದೆ ವಾಸ್ತವದಲ್ಲಿ ಎಷ್ಟರಮಟ್ಟಿಗೆ ಜಾರಿಯಲ್ಲಿದೆ ಎಂಬುದರ ಚರ್ಚೆ ನಡೆಸಲು ಇವತ್ತು ಸಭೆ ಕರೆದಿದ್ದೆವು. ಈಗಾಗಲೇ ಎರಡು ಪ್ರಮುಖ ಸಭೆಗಳನ್ನು ಮಾಡಿದ್ದೇವೆ. ಕನ್ನಡ ಕಲಿಸದ ಶಾಲೆಗಳ ಮೇಲೆ ಕಣ್ಣಿಡಲು ಉನ್ನತ ಪರಿಶೀಲನಾ ಸಮಿತಿ ರಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ನಾನು ಮೊದಲಾದವರು ಈ ಸಭೆಯಲ್ಲಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.