ವರನಟ ಡಾ ರಾಜ್ ಕುಮಾರ್ , ವಿಷ್ಣುವರ್ಧನ್ , ರವಿಚಂದ್ರನ್ , ಅನಂತ್ ನಾಗ್ , ಶಂಕರ್ ನಾಗ್ ರಂತಹ ದೊಡ್ಡ ದೊಡ್ಡ ನಟರುಗಳ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಮಹಾಲಕ್ಷ್ಮೀ ಅವರು ಕನ್ನಡ ಹೊರತುಪಡಿಸಿ ತೆಲುಗು , ತಮಿಳು & ಮಲಯಾಳಂನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾತೃಭಾಗ್ಯ ಚಿತ್ರದ ನಂತರ ನಟಿ ಮಹಾಲಕ್ಷ್ಮೀ ಅವರು ಯಾವ ಚಿತ್ರದಲ್ಲೂ ಸಹ ಕಾಣಿಸಿಕೊಳ್ಳಲಿಲ್ಲ.

ಚಿತ್ರರಂಗದಿಂದ ಇವರು ದೂರಾಗುತ್ತಾ ಇದ್ದಂತೆ ಹಲವಾರು ರೂಮರ್ ಗಳು ಹರಿದಾಡಿದವು. ಸ್ಟಾರ್ ನಟ ಒಬ್ಬ ಮಹಾಲಕ್ಷ್ಮೀ ಅವರಿಗೆ ಮೋಸ ಮಾಡಿದ್ದಕ್ಕೆ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಟಿತು. & ಮಹಾಲಕ್ಷ್ಮೀ ಅವರು ಸನ್ಯಾಸಿಯಾಗಿದ್ದಾರೆ ಎಂದೂ ಸಹ ಹೇಳಿಲಾಯಿತು. ಇನ್ನು ಇದೀಗ ಮತ್ತೊಮ್ಮೆ ಮಹಾಲಕ್ಷ್ಮೀ ಅವರು ಕನ್ನಡ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದು ತಮ್ಮ ಮೇಲಿನ ರೂಮರ್ ಸುಳ್ಳು.. ನಾನು ನನ್ನ ಕುಟುಂಬ ಚೆನ್ನಾಗಿದ್ದೇವೆ ಎಂದು ಹೇಳುವುದರ ಮೂಲಕ ಹರಿದಾಡುತ್ತಿದ್ದ ಎಲ್ಲಾ ಸುದ್ದಿಗೆ ಬ್ರೇಕ್ ಬಿದ್ದಿದೆ.

Add comment