“ದಿ ಬೆಸ್ಟ್ ಆಕ್ಟರ್” ಗೆ ಪ್ರಶಸ್ತಿಗಳ ಗೌರವ

“ದಿ ಬೆಸ್ಟ್ ಆಕ್ಟರ್” ಟೈಟಲ್ ಹೇಳುವಂತೆಯೇ ಸಿನಿಮಾ ಎಲ್ಲಾ ವಿಭಾಗಗಳು ದಿ ಬೆಸ್ಟ್ ಆಗಿದೆ. ಅದಕ್ಕೆ ಪೂರವಾಗುವಂತೆ ಪ್ರಶಸ್ತಿಗಳು ಈ ಸಿನಿಮಾದತ್ತ ಹರಿದು ಬರುತ್ತಿವೆ. ಇತ್ತೀಚಿಗೆ ಮುಂಬೈ ನಲ್ಲಿ ನಡೆದ ಸಮಾರಂಭದಲ್ಲಿ 4 ಪ್ರಶಸ್ತಿಗಳು ಬಂದಿದ್ದು, ಗ್ಲೋಬಲ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಿತ್ತು.

ದಿನೇಶ್ ವೈದ್ಯ ಅಂಪಾರು ಮತ್ತು ಸರ್ವಸ್ವ ಪ್ರೊಡಕ್ಷನ್ಸ್ ಜಂಟಿ ನಿರ್ಮಾಣದ ಈ ಸಿನಿಮಾಕ್ಕೆ ಈ ಕೆಳಗಿನ ನಾಲ್ಕು ವಿಭಾಗಳಲ್ಲಿ ಪ್ರಶಸ್ತಿ ಬಂದಿದೆ.
ಮಾಧವ ಕಾರ್ಕಡ – ಬೆಸ್ಟ್ ಆಕ್ಟರ್
ನಾಗರಾಜ್ ಸೋಮಯಾಜಿ – ಬೆಸ್ಟ್ ಡೈರೆಕ್ಟರ್
ಎಸ್.ಕೆ ರಾವ್ – ಬೆಸ್ಟ್ ಸಿನಿಮಾಟೋಗ್ರಾಫರ್
ದಿ ಬೆಸ್ಟ್ ಆಕ್ಟರ್ – ಬೆಸ್ಟ್ ಮೂವಿ

ಸಿನಿಮಾ ಜಗತ್ತಿನ ನೋವು ಕಷ್ಟ ಮತ್ತು ಸಾಧನೆ ದಾರಿಯನ್ನು ಆ 40 ನಿಮಿಷದಲ್ಲಿ ಪ್ರೇಕ್ಷಕನಿಗೆ ಮುಟ್ಟುವಂತೆ ಹೇಳಿರುವ ವಿಧಾನ, ಸಂಭಾಷಣೆ ಶೈಲಿ, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯಗಳು ಇವೆಲ್ಲಾ ಅಂಶಗಳು ಈ ಸಿನಿಮಾಕ್ಕೆ ಹಲವು ಪ್ರಶಸ್ತಿಗಳು ಬರೋದಿಕ್ಕೆ ಕಾರಣವಾಗಿದೆ.

ಇದಕ್ಕೂ ಮುಂಚೆ ಚಿತ್ರದ ಸಿನಿಮಾಟೋಗ್ರಾಫಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಬಂದಿದ್ದು, ಈ ಸುಂದರ ಕ್ಯಾಮೆರಾ ಕೈಚಳಕ ತೋರಿದವರು ಎಸ್. ಕೆ. ರಾವ್ ಅವರು. NEZ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಕೊಲ್ಕತ್ತಾ ಇವರು ಈ ಚಿತ್ರದ ನಿರ್ದೇಶಕರಾದ ನಾಗರಾಜ್ ಸೋಮಯಾಜಿ ಅವರಿಗೆ ಬೆಸ್ಟ್ ಡೈರೆಕ್ಟರ್ (ಜ್ಯೂರಿ ಮೆನ್ಷನ್ ) ಪ್ರಶಸ್ತಿಗೆ ಆಯ್ಕೆ ಮಾಡಿ ಅಭಿನಂದಿಸಿದ್ದಾರೆ. ಈ ಸಿನಿಮಾಕ್ಕೆ ಬಾಸ್ಕರ್ ಬಂಗೇರಾ ಸಂಭಾಷಣೆ ಬರೆದಿದ್ದು, ಅರ್ಜುನ್ ರಾಮು ಸಂಗೀತ ನೀಡಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.