‘ಉಳಿದವರು ಕಂಡಂತೆ’ ಗೂ, ಅಳಿದು ಉಳಿದವರಿಗೂ ಏನ್ ಸಂಬಂಧ..?

ಉಳಿದವರು ಕಂಡಂತೆ ಸಿನಿಮಾದ ಮೂಲಕ ಚಂದನವನದಲ್ಲಿ ಸಂಚಲನ ಸೃಷ್ಟಿಸಿದ್ದ ರಕ್ಷಿತ್ ಶೆಟ್ರಿಗೂ ಅಳಿದು ಉಳಿದವರು ತಂಡಕ್ಕೂ ಏನ್ ಸಂಬಂಧ. ಹೊಸತನದ ಈ ಅಳಿದು ಉಳಿದವರು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೆ ಸಂಬಂಧ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಬಿಡುಗಡೆ ತಯಾರಿಯ ಬ್ಯೂಸಿಯ ನಡುವೆ ಹೊಸತನದ ತಂಡಕ್ಕೆ ಪ್ರೋತ್ಸಾಹ ಮಾಡ್ತಿರೋದು ಸಂತಸದ ಸಂಗತಿ. ಹೌದು, ಅಶು ಬೇಂದ್ರ ನಾಯಕನಾಗಿ ಮತ್ತು ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿರೋ “ಅಳಿದು ಉಳಿದವರು” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಅಳಿದು ಉಳಿದವರು ಚಿತ್ರವನ್ನು ಅರವಿಂದ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇದೇ ಕಾರಣಕ್ಕೆ ಫಸ್ಟ್ ಲುಕ್ ಪೋಸ್ಟರ್ ಕೂಡ ಪತ್ತೇದಾರಿ ಮಾದರಿಯಲ್ಲಿದೆ. ಇನ್ನುಳಿದಂತೆ ಸಿನಿಮಾದಲ್ಲಿ ನಾಯಕ ಅಶುಬೇಂದ್ರಗೆ ನಾಯಕಿಯಾಗಿ ಸಂಗೀತಾ ಭಟ್ ಅಭಿನಯಿಸಿದ್ದು, ಅತುಲ್ ಕುಲಕರ್ಣಿ, ಲೂಸಿಯಾ ಪವನ್ ಕುಮಾರ್ ಹಾಗೂ ಧರ್ಮಣ್ಣ ಕಡೂರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ, ಅಭಿಷೇಕ್ ಕಾಸರಗೋಡು, ಅರವಿಂದ್ ಕಶ್ಯಪ್, ಅಭಿನ್ ರಾಜೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ.  ಶೀಘ್ರದಲ್ಲೇ ಚಿತ್ರತಂಡ ಟೀಸರ್​ ರಿಲೀಸ್​ ಮಾಡಲಿದ್ದು, ಡಿಸೆಂಬರ್ ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.