“ಕಾಲವೇ ಮೋಸಗಾರ” ಅನ್ನೋದಿಕ್ಕೆ ಕಾರಣ ಏನು..?

ಚಂದನವನದಲ್ಲಿ ಹೊಸಬರ ಹೊಸತನದ ಸಿನಿಮಾಗಳು ಸಖತ್ ಸದ್ದು ಮಾಡ್ತಿದ್ದು, ಈಗ ಸರದಿಯಲ್ಲಿ ಕಾಲವೇ ಮೋಸಗಾರ ತಂಡ ಬಂದಿದೆ. ಕೆಲ ದಿನಗಳ ಹಿಂದೆ ಮೋಷನ್ ಪೋಸ್ಟರ್ ಮತ್ತು ಟೈಟಲ್ ನಿಂದನೇ ಸಾಕಷ್ಟು ಚರ್ಚೆಯಲ್ಲಿದ್ದ ಈ ಸಿನಿಮಾ ಇವಾಗ ಟೀಸರ್ ರಿಲೀಸ್ ಮಾಡಿ ಮತ್ತೆ ಸುದ್ದಿಯಲ್ಲಿದೆ. ಹೌದು, ಭರತ್ ಸಾಗರ್ , ಯಶಸ್ವಿನಿ ರವೀಂದ್ರ ಮತ್ತು ಶಂಕರಮೂರ್ತಿ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿರೋ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದ ಒಳ್ಳೆ ರೆಸ್ಪಾನ್ಸ್ ಬರ್ತಿದೆ.

ಟೀಸರ್ ನೋಡಿದ ತಕ್ಷಣ ಎಲ್ಲರ ತಲೆಯಲ್ಲೂ ಬರೋದು, ಇದು ಲವ್ ಮಾಸ್ ಸಿನಿಮಾ ಅಂತ. ಹೌದು, ಹೊಸತನದಿಂದ ತುಂಬಿರ ಈ ಟೀಸರ್ ಲವ್ , ಮಾಸ್, ಎಮೋಷನ್ಸ್ ಎಲ್ಲವನ್ನೂ ಒಳಗೊಂಡಿದ್ದು, ಯುವ ಮನಸ್ಸುಗಳನ್ನು ಆಕರ್ಷಿಸುತ್ತಿದೆ. ಈ ಸಿನಿಮಾದಲ್ಲಿ ನಾಲ್ಕು ಸಾಂಗ್ ಗಳಿದ್ದು, ಅಂಥೋನಿ ದಾಸ್, ಸಂಚಿತ್ ಹೆಗ್ಡೆ ಹೀಗೆ ಸಾಕಷ್ಟು ಗಾಯಕರು ಹಾಡಿದ್ದು, ವಿಶೇಷವಾದ ಹಾಡುಗಳು ಎಲ್ಲರ ಮನತಣಿಸಲು ಸಿದ್ಧವಾಗಿವೆ.

ಸಂಜಯ್ ನಿರ್ದೇಶನ ಮಾಡಿರೋ ಈ ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಸಹ “ಲಾಸ್ಟ್ ಪೆಗ್” ಎಂಬ ಟೈಟಲ್ ನೊಂದಿಗೆ ರೆಡಿಯಾಗಿದ್ದು, ದೊಡ್ಡ ದೊಡ್ಡ ಸಿನಿಮಾಗಳಿಗೆ ಪೈಪೋಟಿ ಕೊಡುವುದಕ್ಕೆ ಮುಂದಾಗಿದೆ.
ಇತ್ತೀಚಿಗೆ ಕನ್ನಡದಲ್ಲಿ PAN ಇಂಡಿಯಾ ಸಿನಿಮಾಗಳ ತಯಾರಿ ಮಾಡೋದು ಜಾಸ್ತಿ ಆಗಿದ್ದು, ಕೆಜಿಎಫ್ ನಂತರ ಕುರುಕ್ಷೇತ್ರ, ಪೈಲ್ವಾನ್ ಮತ್ತು ಇತ್ತೀಚಿಗೆ ಬಿಡುಗಡೆಗೆ ರೆಜಿಯಾಗಿರೋ ದಮಯಂತಿ ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿವೆ. ಈ ಸಾಲಿಗೆ ಕಾಲವೇ ಮೋಸಗಾರ ಸೇರ್ಪಡೆಯಾಗಿದೆ.

ಭಾವ ಸ್ಪಂದನ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾಕ್ಕೆ ರಜತ್ ಸಾಲಂಕಿ ಬಂಡವಾಳ ಹೂಡಿದ್ದು, ಲೋಕೇಶ್ ಸಂಗೀತ ನೀಡಿದ್ದಾರೆ. ಇದೇ ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಒಂದೊಳ್ಳೆ ಸಿನಿಮಾವನ್ನು ಕನ್ನಡ ಸಿನಿರಸಿಕರಿಗೆ ಕೊಡುವುದಕ್ಕೆ ಉತ್ಸುಕರಾಗಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.