ನವೆಂಬರ್ 8ಕ್ಕೆ ರವಿಚಂದ್ರನ್ “ಆ ದೃಶ್ಯ”

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗಳ ಮದುವೆ ನಂತರ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿದ್ದು, ಸಿನಿಮಾ ಕೆಲಸಗಳು ಬಹಳ ಚುರುಕಾಗಿ ನಡಿತಿವೆ. ಅವರದೇ ನಿರ್ದೇಶನ ಮತ್ತು ನಟನೆಯ ರಾಜೇಂದ್ರ ಪೊನ್ನಪ್ಪ , ರವಿ ಬೋಪಣ್ಣ ಸಿನಿಮಾಗಳು ಚಿತ್ರೀಕರಣ ಹಂತದಲ್ಲೇ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗಳ ಮಧ್ಯೆ ಶಿವಗಣೇಶನ್ ನಿರ್ದೇಶನದ ಈ ದೃಶ್ಯ ತೆರೆಗೆ ಬರಲು ಸಜ್ಜಾಗಿ ನಿಂತಿದೆ.

ಚಂದನವನದ ಸ್ಟಾರ್ ಪ್ರೊಡ್ಯೂಸರ್ ಕೆ ಮಂಜು ಬಂಡವಾಳ ಹೂಡಿರೋ ಈ ಸಿನಿಮಾ ನವೆಂಬರ್ 15 ತೆರೆ ಕಾಣಬೇಕಿತ್ತು, ಅವತ್ತು ಆಯುಷ್ಮಾನ್ ಭವ ಬಿಡುಗಡೆ ಸಲುವಾಗಿ ಒಂದು ವಾರ ಮುಂಚಿತವಾಗಿ ಬಿಡುಗಡೆಯಾಗ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ನ ಈ ಸಿನಿಮಾ ಕನ್ನಡದಲ್ಲಿ ಯಶಸ್ಸು ಕಂಡ ದೃಶ್ಯ ಸಿನಿಮಾದ ಶೀರ್ಷಿಕೆ ತಗೊಂಡಿರೋದ್ರಿಂದ ನಿರೀಕ್ಷೆ ಜಾಸ್ತಿ ಇದೆ ಸಿನಿಮಾ ಮೇಲೆ.

ಮನುಷ್ಯನ ಜೀವನದಲ್ಲಿ ಮೊಬೈಲ್ ಅನ್ನೋದು ಅವಿಭಾಜ್ಯ ಅಂಗ ಆಗಿದೆ. ಆ ಮೊಬೈಲ್ ಕಳ್ದೋಗಿದಿನೊ ಅಥವಾ ಆಫ್ ಆಗಿನೊ ಮತ್ತೆ ಅದು ಸಿಗೋದ್ರೊಳಗೆ ನಡೆಯೋ ಘಟನೆಯೇ ಆ ದೃಶ್ಯ ಕಥೆ. ರವಿಚಂದ್ರನ್ ಸಿನಿಮಾ ಅಂದಾಕ್ಷಣ ನಮಗೆ ಲವ್ ಸ್ಟೋರಿ ಸಾಂಗ್ಸ್ ಇದೆಲ್ಲಾ ನೆನಪಾಗುತ್ತೆ. ಆದರೆ ಇದ್ರಲ್ಲಿ ಲವ್ ಸ್ಟೋರಿ ಮತ್ತೆ ಹಾಡುಗಳಿಗೆ ಜಾಗವಿಲ್ಲ. ಸಿನಿಮಾದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರೋ ಕ್ಲೈಮ್ಯಾಕ್ಸ್ ಸಾಂಗ್ ಒಂದು ಮಾತ್ರ ಇದ್ದು, ಚಿತ್ರ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಶಿವಗಣೇಶನ್.

ಈ ತರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹಿನ್ನಲೆ ಸಂಗೀತ ಎಷ್ಟು ಮುಖ್ಯನೋ ಹಾಗೇನೆ ಸೈಲೆನ್ಸ್ ಸಹ ಅಷ್ಟೆ ಮುಖ್ಯ
ಆ ಎರಡನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ ಇತ್ತೀಚಿನ ಬಹುತೇಕ ರವಿಚಂದ್ರನ್ ಸಿನಿಮಾಗಳ ಖಾಯಂ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ. ಚಿತ್ರದಲ್ಲಿ ಹಿನ್ನಲೆ ಸಂಗೀತ ಬಹುಮುಖ್ಯ ಪಾತ್ರ ವಹಿಸಿದ್ದು, ರವಿ ಸರ್ ಮುಂದಿನ ಸಿನಿಮಾಗಳಾದ ರಾಜೇಂದ್ರ ಪೊನ್ನಪ್ಪ ಮತ್ತು ರವಿ ಬೋಪಣ್ಣ ಗೆ ಇವರೇ ಸಂಗೀತ ನೀಡುತಿದ್ದಾರೆ.

ತುಂಬಾನೇ ದೊಡ್ಡಮಟ್ಟದ ತಾರಾಬಳಗ ಹೊಂದಿರೋ ಈ ಸಿನಿಮಾದಲ್ಲಿ ರವಿಚಂದ್ರನ್ ಜೊತೆ ಅಚ್ಯುತ್ ರಾವ್, ನಿಸರ್ಗ, ಚೈತ್ರ, ಯಶವಂತ್, ಅರ್ಜುನ್ ಗೌಡ ಮುಂತಾದವರು ನಟಿಸಿದ್ದಾರೆ. ಆ ದೃಶ್ಯ ಚಿತ್ರ ಇದೇ 250ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತಿದ್ದು, ಇದೇ ನವೆಂಬರ್ 8ಕ್ಕೆ ತೆರೆ ಕಾಣಲಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.