ಮೂವರು ನಾಯಕರು… ನಾಲ್ವರು ನಾಯಕಿಯರು: ಹೊಂದಿಸಿ ಬರೆಯಿರಿ

ಚಂದನವನದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯತ್ನಗಳು ಮತ್ತು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈ ತರ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ ಒಂದು ಹೊಸ ಚಿತ್ರತಂಡ. ಈ ಸಿನಿಮಾದಲ್ಲಿ ಒಂದಲ್ಲಾ ಎರಡಲ್ಲಾ ಮೂವರು ನಾಯಕರಿದ್ದು, ಪ್ರವೀಣ್ ತೇಜ್, ಗುಳ್ಟು ಖ್ಯಾತಿಯ ನವೀಶ್ ಶಂಕರ್, ಶ್ರೀ ಮಹಾದೇವ್ ಅಭಿನಯಿಸುತ್ತಿದ್ದಾರೆ. ಇವರಿಗೆ ನಾಯಕಿಯರಾಗಿ ಭಾವನ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಸ್ ನಟಿಸುತ್ತಿದ್ದು, ಇದೇ 20 ನೇ ತಾರೀಖಿನಿಂದ ಚಿತ್ರೀಕರಣಕ್ಕೆ ತೆರಳಲಿದೆ ಚಿತ್ರತಂಡ.

ರಾಕ್ಲೈನ್ ಪ್ರೊಡಕ್ಷನ್ ನಲ್ಲಿ ಕೆಲ್ಸ ಮಾಡ್ತಿದ್ದ ರಾಮೇನಹಳ್ಳಿ ಜಗನ್ನಾಥ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತಿದ್ದು, ದೊಡ್ಡಮಟ್ಟದ ತಾರಾಬಳಗ ಬಳಸಿಕೊಂಡು ಸಿನಿಮಾ ಮಾಡಲು ಹೊರಟಿರೋದು ಖುಷಿಯ ವಿಚಾರ. ಇದರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹೊಸತನದ ಸಿನಿಮಾ ಕೊಡೊ ಭರವಸೆ ಮೂಡಿಸಿದೆ.

ಚಿತ್ರದ ಪೋಸ್ಟರ್ ನೋಡಿದಾಗ ಸಂಭಾಷಣೆಗೆ ಮತ್ತು ಹಾಡುಗಳಿಗೆ ಬಹಳ ಹೊತ್ತು ಕೊಟ್ಟಿದ್ದಾರೆ ಅನ್ಸುತ್ತೆ. ಅದೇ ರೀತಿ ಚಿತ್ರಕ್ಕೆ ಇತ್ತೀಚಿಗೆ ಗುಣಮಟ್ಟದ ಬರಹದ ಮೂಲಕ ಪ್ರಖ್ಯಾತರಾಗಿರೋ ಟಗರು ಖ್ಯಾತಿಯ ಮಾಸ್ತಿ ಮತ್ತು ಪ್ರಶಾಂತ್ ರಾಜಪ್ಪ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ಜೋ ಕೋಸ್ಟಾ ಸಂಗೀತ ನೀಡಿದ್ದು, ಶಾಂತಿ ಸಾಗರ್ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.