ದಾಖಲೆ ಮೊತ್ತಕ್ಕೆ ರೇಮೊ ಆಡಿಯೋ ರೈಟ್ಸ್ ಸೇಲ್..!

ನಟ ಸಾರ್ವಭೌಮ ಅಂತಹ ಹಿಟ್ ಚಿತ್ರ ನೀಡಿದ ನಂತರ ನಿರ್ದೇಶಕ ಪವನ್ ವಡೆಯರ್ ಅವರು ರೇಮೊ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಇಶಾನ್ ಮತ್ತು ಆಶಿಕಾ ರಂಗನಾಥ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಹಿಂದೆ ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಒಂದನ್ನು ಹಾಕಿ ಸುದ್ದಿ ಮಾಡಿದ್ದ ರೇಮೋ ಇದೀಗ ಆಡಿಯೋ ರೈಟ್ಸ್ ಮೂಲಕ ಸುದ್ದಿಯಲ್ಲಿದೆ.

ಹೌದು ರೆಮೋ ಚಿತ್ರದ ಆಡಿಯೋ ರೈತರನ್ನು ಇದೀಗ ಆನಂದ್ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದು ದಾಖಲೆಯ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಸುದ್ದಿ ಇದೆ. ಇನ್ನು ಆಡಿಯೋ ಖರೀದಿಸಿದ ನಂತರ ಕಂಪನಿಯ ಮಾಲೀಕ ಶ್ಯಾಮ್ ಅವರು ಸಂತಸ ವ್ಯಕ್ತಪಡಿಸಿದ್ದು , ಚಿತ್ರತಂಡಕ್ಕೆ ಶುಭಾಶಯವನ್ನು ಕೋರಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತದ ಅಡಿಯಲ್ಲಿ ಹಾಡುಗಳು ಮೂಡಿ ಬಂದಿದ್ದು ಇದೇ ಮೊದಲ ಬಾರಿಗೆ ಪವನ್ ಒಡೆಯರ್ ಮತ್ತು ಅರ್ಜುನ್ ಜನ್ಯ ಅವರ ಕಾಂಬಿನೇಷನ್ ಏರ್ಪಟ್ಟಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.