ನವೆಂಬರ್ 15 ಕ್ಕೆ ಕನ್ನಡ ಪಾಠ ಮಾಡೋಕೆ ಬರ್ತಾವ್ರೆ ಕಾಳಿದಾಸ ಮೇಷ್ಟ್ರು

ನವೆಂಬರ್ ಬಂದಾಕ್ಷಣ ಕನ್ನಡ ಪರವಾದ ಕೆಲಸಗಳು ಅಥವಾ ಕನ್ನಡ ಪರವಾದ ಕಾರ್ಯಕ್ರಮಗಳು ಮಾಡೋದು ಸಹಜ. ಚಿತ್ರರಂಗದಲ್ಲೂ ಸಹ ಕನ್ನಡ ಸಿನಿಮಾಗಳಿಗೆ ಪಾಮುಖ್ಯತೆ ನೀಡಿ ಬಿಡುಗಡೆ ಮಾಡುವುದು ಪದ್ಧತಿ. ಹಾಗೇನೆ ಈ ಬಾರಿ ನವೆಂಬರ್ 15 ಕ್ಕೆ ಸಿನಿಮಾ ಮೂಲಕ ಕನ್ನಡತನ ಒಂದು ಮೂಲವಾದ ಕನ್ನಡದ ಶಿಕ್ಷಣ ಪದ್ಧತಿಯ ಬಗ್ಗೆ ಸಿನಿಮಾ ಬರುತ್ತಿದೆ. ಹೌದು… ಚಿತ್ರಸಾಹಿತಿ ಕವಿರಾಜ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರೋ ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಇದೇ ನವೆಂಬರ್ 15ಕ್ಕೆ ಬಿಡುಗಡೆಯಾಗುತ್ತಿದ್ದು, ನಮ್ಮ ಶಿಕ್ಷಣ ವ್ಯವಸ್ಥೆ, ಕಲಿಕಾ ಮೂಲದ ಬಗ್ಗೆ ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ.

ನವರಸ ನಾಯಕ ಅಂದಾಕ್ಷಣ ಅಲ್ಲಿ ಹಾಸ್ಯಕ್ಕೇನು ಕೊರತೆ ಇರಲ್ಲ ಅನ್ನೋದು ನಿಮಗೆ ಗೊತ್ತಿರೋ ವಿಚಾರ. ಈ ಸಿನಿಮಾದಲ್ಲೂ ಸಹ ಶಿಕ್ಷಣ ಪದ್ಧತಿಯ ಮತ್ತು ಇವತ್ತಿನ ಸರ್ಕಾರಿ ಕನ್ನಡ ಶಾಲೆಗಳ ಪರಿಸ್ಥಿತಿಗಳ ಗಂಬೀರ ವಿಷಯದ ಬಗ್ಗೆ ಹಾಸ್ಯಮಯವಾಗಿ ಹೇಳುತ್ತಾ ಜನರಿಗೆ ತಲುಪಿಸಲು ಹೊರಟಿದ್ದಾರೆ. ಸರ್ವರಿಗೂ ಸಮಾನ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ನಡೆಯುವ ಕಥಾಹಂದರವೇ ಈ ಕಾಳಿದಾಸ ಕನ್ನಡ ಮೇಷ್ಟ್ರು.

ಕಾಳಿದಾಸ ಎಂಬ ಸರ್ಕಾರಿ ಶಾಲೆ ಶಿಕ್ಷಕನ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ನಡೆಯುವ ತಲ್ಲಣಗಳ ಸುತ್ತ ಹೆಣೆಯಲಾದ ಈ ಕಥೆಯಲ್ಲಿ ನವರಸನಾಯಕನ ಜೊತೆ ಜೋಡಿಯಾಗಿ ಮೇಘನಾ ಗಾಂವ್ಕರ್ ನಟಿಸಿದ್ದು, ಇನ್ನುಳಿದಂತೆ ತಾರಾಂಗಾಣದಲ್ಲಿ ಅಂಬಿಕಾ, ತಬಲನಾಣಿ, ನಾಗಾಭರಣ, ಸುಂದರ್, ಉಷಾ ಭಂಡಾರಿ, ಯತಿರಾಜ್, ರಘು ರಾಮನಕೊಪ್ಪ ಅಭಿನಯಿಸಿದ್ದಾರೆ.

ಉದಯಫಿಲ್ಮ್ಸ್ ನಿರ್ಮಾಣದ ಈ ಸಿನಿಮಾಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ. ಕೆಎಂ ಪ್ರಕಾಶ್ ಎಡಿಟಿಂಗ್ ಕೆಲ್ಸ ಮಾಡಿದ್ದು , ವಿಶೇಷ ಹಾಡೊಂದಕ್ಕೆ ರಚಿತಾ ರಾಮ್ ಸೇರಿದಂತೆ 21 ನಾಯಕಿಯರು ಹೆಜ್ಜೆ ಹಾಕಿದ್ದು ಹೊಸ ದಾಖಲೆ ಬರೆಯಲಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.