ಇದೇ 25ಕ್ಕೆ ಮೂರ್ಕಲ್ ಎಸ್ಟೇಟ್ ತೆರೆಗೆ

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ಪ್ರಯೋಗಗಳ ಮೂಲಕ ಸುದ್ದಿಯಾಗುತ್ತಿರೋ ಹೊಸ ಯುವ ಪ್ರತಿಭೆಗಳನ್ನು ನೋಡಿದ್ರೆ ತುಂಬಾನೇ ಖುಷಿಯಾಗುತ್ತೆ. ಅಂತಹ ಯುವ ಪ್ರತಿಭೆಗಳ ಸಾಲಿಗೆ ಈ ಮೂರ್ಕಲ್ ಎಸ್ಟೇಟ್ ಚಿತ್ರತಂಡ ಸಹ ಸೇರುತ್ತೆ. ಹಾರರ್ ಸಸ್ಪೆನ್ಸ್ ಚಿತ್ರಗಳಿಗೆ ಸೆನ್ಸಾರ್ ವಿಚಾರದಲ್ಲಿ ಹಲವು ಗೊಂದಲಗಳು ಮೂಡುವುದು ಸಹಜ . ಈ ಚಿತ್ರಕ್ಕೂ ಆ ಸೆನ್ಸಾರ್ ಸಮಸ್ಯೆ ಬಂದಿದ್ದು ಸೆನ್ಸಾರ್ ಮಂಡಳಿಯವರೇ ಸಹ ಸಿನಿಮಾ ಬಗ್ಗೆ ಭಯ ಬಿದ್ದಿದ್ದು, ಅರೋಗ್ಯವಂತರು ಮತ್ತೆ 18 ವರ್ಷ ಮೇಲ್ಪಟ್ಟವರೇ ನೋಡಬೇಕು ಅಂದಿದ್ದಾರೆ.

ಭದ್ರಾವತಿ ಮೂವಿ ಮೇಕರ್ಸ್ ಅವರ ಈ ಮೂರ್ಕಲ್ ಎಸ್ಟೇಟ್ ಸಿನಿಮಾಕ್ಕೆ ಪ್ರಮೋದ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಕುಮಾರ್ ಭದ್ರಾವತಿಯವರು ಬಂಡವಾಳ ಹೂಡಿದ್ದಾರೆ. ಇವರಿಗೆ ಕೃಷ್ಣ ಎಲ್ ಮತ್ತು ಮುನಿಸ್ವಾಮಿಯವರು ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಪ್ರವೀಣ್ ಎಂಬ ಹೊಸ ನಾಯಕ ನಟ ಅಭಿನಯಿಸಿದ್ದು, ನಾಯಕಿಯಾಗಿ ಪ್ರಕೃತಿ ಗೌಡ ನಟಿಸಿದ್ದಾರೆ.

ಮೈಸೂರು, ಮೂಡಿಗೆರೆ, ಚಿಕ್ಕಮಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಚಿತ್ರ ಹಾರರ್ ಫೀಲ್ ನಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಈ ಕಥೆಯೇನ್ ಹೊಸದಾಗಿಲ್ಲ. ಬಟ್ ಸೌಂಡಿಂಗ್ ಚೆನ್ನಾಗಿ ಬಂದಿದೆ ಹೊಸದಾಗಿ ಫೀಲ್ ಕೊಡುತ್ತೆ ಭಯ ಹುಟ್ಟಿಸುತ್ತೆ ಅನ್ನುತ್ತಾರೆ ನಿರ್ದೇಶಕ ಪ್ರಮೋದ್ ಕುಮಾರ್.

ಈ ಸಿನಿಮಾ ಇದೇ 25 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಕುತೂಹಲಕ್ಕೆ ನಾಂದಿಯಾಡಲಿದೆ. ಇಡೀ ತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.