“ರಂಗನಾಯಕಿ” ಯಾಗಿ ಅದಿತಿ ಪ್ರಭುದೇವ

ರಂಗನಾಯಕಿ ಅಂದಾಕ್ಷಣ ನೆನಪಾಗೋದು 1981ರ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಆರತಿ, ಅಂಬರೀಶ್, ರಾಮಕೃಷ್ಣ, ಅಶೋಕ್ ಅಭಿನಯದ ಸಿನಿಮಾ. ಅದೇ ಟೈಟಲ್ ತಗೊಂಡು ಇವಾಗ ಮತ್ತೆ ಮಹಿಳಾ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡಿದೆ. ಭರವಸೆಯ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಸಿನಿಮಾ ಇದೇ ನವೆಂಬರ್ ೧ ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ವಿಶೇಷ ಸಿನಿಮಾ ಆಗಿಲಿದೆ ಎಂಬ ಭರವಸೆ ಮೂಡಿಸಿದೆ.

ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಲಿರೋ ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಮಿಂಚಿದ್ದು, ಇದರ ಜೊತೆ ಟೋಪಿವಾಲ ಖ್ಯಾತಿಯ ಶ್ರೀನಿ ಮತ್ತು ಪದ್ಮಾವತಿ ಧಾರಾವಾಹಿಯ ತ್ರಿವಿಕ್ರಮ್ ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಕನ್ನಡಕ್ಕೊಂಡು ಹೆಮ್ಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂಡಿಯನ್ ಫಿಲ್ಮ್ ಪೆಸ್ಟಿವಲ್ ಇಂಡಿಯನ್ ಪನೋರಮಾ ಗೆ ಆಯ್ಕೆಯಾಗಿರೋ ಏಕೈಕ ಕನ್ನಡ ಸಿನಿಮಾ ಇದಾಗಿದ್ದು, ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಹೇಳುವ ಸಿನಿಮಾ ಇದು.

ದೆಹಲಿ ಅತ್ಯಚಾರ ಪ್ರಕರಣ ದ ತರನೇ ಒಬ್ಬ ಹುಡುಗಿ ಅತ್ಯಾಚಾರ ಆದ್ಮೇಲೂ ಹೇಗ್ ಸಮಾಜನ ಸಹಿಸ್ಕೊಂಡು ಬದುಕ್ತಾಳೆ ಅನ್ನೋದು ಸಿನಿಮಾ ಕಥೆ. ಯಾವುದೇ ಪ್ರತಿಕಾರ ಇಲ್ಲದೇ ಅವರಿಗೆ ಉತ್ತರವಾಗಿ ನಿಲ್ತಾಳೆ ಎಂಬುದನ್ನ ತೋರಿಸಿದ್ದಾರಂತೆ ನಿರ್ದೇಶಕ ದಯಾಳ್ ಅವರು. ದಯಾಳ್ ಅವರೇ ಬರೆದಿರೋ ಕಾದಂಬರಿ ಸಿನಿಮಾ ಇದು.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.