ಸದ್ದು ಮಾಡುತ್ತಿದೆ “ಕಡಲತೀರದ ಭಾರ್ಗವ” ಟ್ರೈಲರ್

ಕನ್ನಡಕ್ಕೆ ಕೆಜಿಎಫ್ ನಂತರ ಹೊಸದೊಂದು ಯುಗನೇ ಪ್ರಾರಂಭವಾಗಿದೆ ಅಂತ ಹೇಳಬಹುದು. ಪೈಲ್ವಾನ್ ಕುರುಕ್ಷೇತ್ರ ದಂತ ಸಿನಿಮಾಗಳೆಲ್ಲಾ ರಾಷ್ಟ್ರ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದು, ಕನ್ನಡದಲ್ಲೂ ಸಹ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಇತ್ತೀಚಿಗೆ ಈ ಬೆಳವಣಿಗೆಗೆ ಪೂರಕವಾದಂತೆ ಬಬ್ರೂ ಮತ್ತೆ ಕಡಲ ತೀರದ ಭಾರ್ಗವ ಟ್ರೈಲರ್ ಬಿಡುಗಡೆಯಾಗಿವೆ.

ಕಡಲತೀರದ ಭಾರ್ಗವ ಎಂಬ ಶೀರ್ಷಿಕೆಯಲ್ಲಿನೇ ಎನರ್ಜಿ ತುಂಬಿಕೊಂಡಿರೋ ಈ ಸಿನಿಮಾ ತನ್ನ ಮೊದಲ ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಮೇಕಿಂಗ್ ಬಗ್ಗೆ ಮತ್ತು ಆ ಹಿನ್ನಲೆ ಸಂಗೀತದ ಬಗ್ಗೆ ತುಂಬಾನೇ ದೊಡ್ಡಮಟ್ಟದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ಚಿತ್ರತಂಡ ಸಹ ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೋ ಮನೋಭಾವದಲ್ಲಿದ್ದಾರೆ.

ಪನ್ನಗ ಸೋಮ್ ಶೇಖರ್ ಎಂಬ ಪ್ರತಿಭಾನ್ವಿತ ನಿರ್ದೇಶಕನ ಕೈಚಳಕದಲ್ಲಿ ಮೂಡಿಬಂದಿರೋ ಈ ಕಡಲತೀರದಭಾರ್ಗವ ಸಿನಿಮಾದ ಟ್ರೈಲರ್ ಚಂದನವನದಲ್ಲಿ ಸಂಚಲನ ಮೂಡಿಸೋದ್ರಲ್ಲಿ ಅನುಮಾನನೇ ಇಲ್ಲ. ವಿಶೇಷವಾಗಿ ಕೀರ್ತನ್ ಪೂಜಾರಿಯವರ ಕ್ಯಾಮೆರಾ ವರ್ಕ್ ಗೆ ಪ್ರಶಂಸೆ ವ್ಯಕ್ತವಾಗಿದ್ದು, ಇದರ ಜೊತೆ ಸಂಗೀತ ನಿರ್ದೇಶಕ ಅನಿಲ್ ಸಿಜೆ ಅವರ ಕೆಲಸಕ್ಕೂ ಶಬ್ಬಾಶ್ ಗಿರಿ ಹೇಳಿದ್ದಾರೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಭರತ್ ಮತ್ತು ಪಟೇಲ್ ವರುಣ್ ರಾಜ್ ಟ್ರೈಲರ್ ನಲ್ಲಿ ಎಲ್ಲರ ಮೆಚ್ಚುಗೆಯ ಪಾತ್ರಗಳನ್ನು ಮಾಡಿದ್ದಾರೆ. ಟ್ರೈಲರ್ ನಲ್ಲಿ ಬರೋ ಕಡಿಮೆ ಸಮಯದಲ್ಲೇ ಗುರುತಿಸಿಕೊಂಡಿರೋ ಶೃತಿ ಪ್ರಕಾಶ್ ಅವರು ಸಹ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಅನ್ಸೋದು ನಿಜ. ಇದು ಚಿತ್ರೀಕರಣ ಹಂತದಲ್ಲಿದ್ದು, ಇನ್ನೂ ಎರಡು ಟ್ರೈಲರ್ ಸಹ ಬರಲಿದೆ. ಇಡೀ ತಂಡಕ್ಕೆ ಶುಭಹಾರೈಕೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.