ಸಮೃದ್ಧಿಯಾಗಿದೆ ಮಾಲ್ಗುಡಿ ಡೇಸ್ ಫಸ್ಟ್ ಲುಕ್ ಪೋಸ್ಟರ್

ಮಾಲ್ಗುಡಿ ಡೇಸ್ ಅಂದಾಕ್ಷಣ ನೆನಪಾಗೋದು ಶಂಕರ್ ನಾಗ್ ಅವರ ಹಿಂದಿ ಸೀರಿಯಲ್. ಇಂದಿಗೂ ಆ ಸಿರೀಯಲ್ ನ ಗುಣಮಟ್ಟ ಆ ಹೆಸರು ಎಲ್ಲದಕ್ಕೂ ಅದರದೇ ತೂಕ ಹೊಂದಿದೆ. ಅದೇ ಹೆಸರಲ್ಲಿ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮಾಡಿ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಸ್ವಯಂ ಪ್ರಭಾ ಎಂಟ್ರಟೈನ್ಮೆಂಟ್ ಮತ್ತು ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡಿರೋ ಈ ಚಿತ್ರದ ಮೂಖ್ಯಭೂಮಿಕೆಯಲ್ಲಿ ವಿಜಯ ರಾಘವೇಂದ್ರ ಅಭಿನಯಿಸಿದ್ದು, ಸಿನಿಮಾದ ವಿಶೇಷ ಪಾತ್ರದ ಪೋಸ್ಟರ್ ಅನ್ನು ನವರಸನಾಯಕ ಜಗ್ಗೇಶ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

ಚಿತ್ರದಲ್ಲಿ ವಿಜಯ್ ಅವರ ಪಾತ್ರ ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬ ದೊಡ್ಡ ಸಾಹಿತಿಯಾಗಿದ್ದು, ಅವರ ದಿನಗಳ ಮತ್ತು ನೆನಪುಗಳ ಮೆಲುಕು ಈ ಸಿನಿಮಾ. ಈ ಸಿನಿಮಾ ವಿಜಯ್ ರಾಘವೇಂದ್ರ ಅವರ ಸಿನಿ ಜರ್ನಿಯಲ್ಲೇ ಮಹತ್ವದ ಸಿನಿಮಾ ಆಗುತ್ತದೆ ಎನ್ನುವುದು ಚಿತ್ರತಂಡದವರ ಮಾತು. ವಿಶೇಷ ಪಾತ್ರದಲ್ಲಿ ಮಿಂಚಿರೋ ವಿಜಯ್ ರಾಘವೇಂದ್ರ ಅವರೂ ಸಹ ತುಂಬಾನೇ ಖುಷಿಯಲ್ಲಿದ್ದು, ತಾವೆಂದು ನಟಿಸಿದ ಬೇರೆ ತರದ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಮೊದಲ ಪೋಸ್ಟರ್ ನಲ್ಲಿ ತುಂಬಾನೇ ವಿಶೇಷತೆಗಳಿಂದ ಕೂಡಿದ್ದು, ಆ ಪೋಸ್ಟರ್ ನಲ್ಲಿ ವಿಜಯ್ ರಾಘವೇಂದ್ರ ಅವರ ಲುಕ್ ಸಂಚಲನ ಮೂಡಿಸುತಿದ್ದು, ಎಲ್ಲರಿಗೂ ಆಕರ್ಷಣಿಯವಾಗಿದೆ. ವಿಶೇಷ ಮೇಕಪ್ ನಲ್ಲಿ ತುಂಬಾನೇ ವಯಸ್ಸಾದವರಂತೆ ಕಾಣುವ ವಿಜಯ್ ತುಂಬಾನೇ ಮುದ್ದಾಗಿ, ಮುಗ್ಧವಾಗಿ ಕಾಣ್ತಾವ್ರೆ.

ತುಳು ಸಿನಿಮಾ ಅಪ್ಪೇ ಟೀಚರ್ ಖ್ಯಾತಿಯ ಕಿಶೋರ್ ಮೂಡಬಿದ್ರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಒಟ್ಟು 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ನಾಯಕಿಯಾಗಿ ಮೊದಲ ಬಾರಿಗೆ ಗ್ರೀಷ್ಮ ಶ್ರೀಧರ್ ನಟಿಸಿದ್ದು, ಇವರ ಜೊತೆ ತಾರಾಂಗಣದಲ್ಲಿ ಬಿಗ್ ಬಾಸ್ ಖ್ಯಾತಿಯ ಧನರಾಜ್, ಗೋಪಿನಾಥ್ ಭಟ್, ರೂಪೇಶ್, ತೇಜಸ್ವಿನಿ, ಸಂದೇಶ್ ಜೈನ್ ಅಭಿನಯಿಸಿದ್ದಾರೆ.

ಮಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಪಾಂಡಿಚೇರಿ, ಆಗುಂಬೆ ಸುತ್ತಮುತ್ತ ಚಿತ್ರೀಕರಣ ನಡೆದಿರೋ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ನೀಡುತಿತ್ತು, ಒಟ್ಟಾರೆ 6 ಹಾಡುಗಳಿವೆ. ಪ್ರದೀಪ್ ನಾಯಕ್ ಎಡಿಟಿಂಗ್ ವರ್ಕ್ ಮಾಡಿದ್ದರೆ, ಉದಯ್ ಲೀಲಾ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.