ಮುರಳಿ ದ್ವಿಪಾತ್ರ ಕ್ಲಿಕ್ ಆಯ್ತಾ? ಹೇಗಿದೆ ಭರಾಟೆ? ವಿಮರ್ಶೆ ಓದಿ.

ಭರಾಟೆ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು ಬಹದ್ದೂರ್ ಮತ್ತು ಭರ್ಜರಿ ಯಂತಹ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ನೀಡಿದ್ದ ನಿರ್ದೇಶಕ ಚೇತನ್ ಅವರಿಗೆ ಹ್ಯಾಟ್ರಿಕ್ ಸಿನಿಮಾ ಭರಾಟೆ. ಇನ್ನು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿರುವ ಮುರಳಿ ಅವರ ಭರಾಟೆ ಚಿತ್ರದ ಮೇಲೆ ಪ್ರೇಕ್ಷಕರಲ್ಲಿ ನಿರೀಕ್ಷೆ ಸಾಮಾನ್ಯವಾಗಿಯೇ ಇತ್ತು. ಇನ್ನು ರಾಜಸ್ಥಾನದಲ್ಲಿ ಶುರುವಾಗಿ ಕರ್ನಾಟಕದಲ್ಲಿ ಎಂಡ್ ಆಗುವ ಚಿತ್ರಕಥೆ ಭರಾಟೆ ಯದ್ದು.

ರಾಜಸ್ಥಾನದಲ್ಲಿ ಟೂರಿಸ್ಟ್ ಗೈಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮುರಳಿ ಅವರು ನಾಯಕಿಯನ್ನು ಅಲ್ಲಿಯೇ ಭೇಟಿಯಾಗುತ್ತಾರೆ. ನಂತರ ನಾಯಕಿ ಮೇಲೆ ಕ್ರಶ್ ಆಗಿ ಲವ್ ಮಾಡಲು ಆರಂಭಿಸುತ್ತಾರೆ ಅಷ್ಟರಲ್ಲಿ ನಟಿ ಅಲ್ಲಿಂದ ಕರ್ನಾಟಕಕ್ಕೆ ಮರಳುತ್ತಾಳೆ. ಇನ್ನು ನಾಯಕಿಯನ್ನು ಹುಡುಕಿಕೊಂಡು ಮತ್ತೆ ಹೀರೋ ಕರ್ನಾಟಕಕ್ಕೆ ಬರುತ್ತಾನೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು ಯಾಕೆಂದರೆ ಹಿಂದಿನ ಚಿತ್ರಗಳಲ್ಲಿ ಇದ್ದ ಚೇತನ್ ಅವರ ಕಥೆ ಇಲ್ಲಿ ಇಲ್ಲ. ಮತ್ತೊಂದು ಕಾರಣಕ್ಕೆ ಕರ್ನಾಟಕಕ್ಕೆ ಬರುವ ಶ್ರೀ ಮುರಳಿ ಅವರಿಗೆ ಇಪ್ಪತ್ತು ವರ್ಷಗಳಿಂದ ತಮ್ಮಿಂದ ದೂರವಾಗಿದ್ದ ಫ್ಯಾಮಿಲಿಗೆ ಪರಿಚಯ ಆಗುತ್ತದೆ.

ಇದೇ ವೇಳೆ ನಾಯಕಿಯ ಜೊತೆ ಟೂ ವೇ ಲವ್ ಕೂಡ ಆಗುತ್ತದೆ. ರಾಯಲ್ ಫ್ಯಾಮಿಲಿಯ ಹುಡುಗಿಯಾದ ನಾಯಕಿಯ ಮನೆಯವರನ್ನು ಒಪ್ಪಿಸಿ ಮುರಳಿ ಅವರು ಮದುವೆ ಆಗುತ್ತಾರಾ? ಎಂಬ ಪ್ರಶ್ನೆ ಪ್ರೇಕ್ಷಕರ ತಲೆಗೆ ಹೊಕ್ಕು ವುದರೊಳಗೆ ಮತ್ತೊಂದು ಬಿಗ್ ಕಥೆ ತೆರೆದುಕೊಳ್ಳುತ್ತದೆ. ಶ್ರೀಮುರಳಿ ಅವರು ನಾಯಕಿ ಗೋಸ್ಕರ ಇಷ್ಟೆಲ್ಲಾ ಮಾಡುತ್ತಿದ್ದಾರೆ ಇಂದು ಚಿತ್ರಮಂದಿರದಲ್ಲಿ ಕುಳಿತಿದ್ದ ಪ್ರೇಕ್ಷಕರಿಗೆ ಶಾಕ್ ನೀಡುವಂತಹ ದೃಶ್ಯವೊಂದು ಸಹ ಬರುತ್ತದೆ.

ಹಾಗಾದರೆ ಶ್ರೀಮುರಳಿ ಅವರು ಕರ್ನಾಟಕಕ್ಕೆ ಬಂದಿದ್ದು ಯಾಕೆ? ಮತ್ತು ಅಲ್ಲಿನ ಕೆಲ ಸಮಸ್ಯೆಗಳನ್ನು ಬಗೆಹರಿಸಿ ನೆಲೆಸುವುದು ನಾಯಕಿ ಗೋಸ್ಕರನಾ? ಕೊನೆಯಲ್ಲಿ ಸಿಗುವಂತಹ ಟರ್ನಿಂಗ್ ಪಾಯಿಂಟ್ ಯಾವುದು ಎಂದು ತಿಳಿಯಬೇಕೆಂದರೆ ನೀವು ಚಿತ್ರಮಂದಿರಕ್ಕೆ ತೆರಳಿ ಭರಾಟೆಯನ್ನು ನೋಡಲೇಬೇಕು. ಇನ್ನು ಚಿತ್ರ ಶುರುವಿನಿಂದ ಕೊನೆಯ ತನಕ ತುಂಬಾ ಕಲರ್ಫುಲ್ ಆಗಿ ಮೂಡಿಬಂದಿದ್ದು ಚೇತನ್ ಅವರ ಸೈಲ್ ಆಫ್ ಮೇಕಿಂಗ್ ಎಲ್ಲಾಕಡೆ ಎದ್ದು ಕಾಣುತ್ತದೆ. ಇನ್ನು ಶ್ರೀಮುರಳಿ ಅವರು ಡ್ಯುಯೆಲ್ ರೋಲ್ನಲ್ಲಿ ಅಭಿನಯಿಸಿರುವುದು ಪ್ರೇಕ್ಷಕರಿಗೆ ಇಷ್ಟವಾಗುವ ಮತ್ತೊಂದು ಪಾರ್ಟ್..

ಇನ್ನು ಚಿತ್ರದ ಸ್ಟಾರ್ ಕಾಸ್ಟ್ ಬಗ್ಗೆ ಹೇಳಬೇಕೆಂದರೆ ಪುಟಗಟ್ಟಲೆ ಬರೆಯುವಂಥ ಅಗತ್ಯತೆ ಇದೆ ಏಕೆಂದರೆ ಹತ್ತಕ್ಕೂ ಹೆಚ್ಚು ವಿಲನ್ಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಯಿಕುಮಾರ್ ಮತ್ತು ಅವರ ಇಬ್ಬರು ಬ್ರದರ್ಸ್ ಹಾಗೂ ಇನ್ನೂ ಮುಂತಾದ ಅತಿ ದೊಡ್ಡ ತಾರಾಗಣವೇ ಚಿತ್ರದಲ್ಲಿ ಇದ್ದು ಫ್ಯಾಮಿಲಿ ಸಮೇತರಾಗಿ ಕುಳಿತು ಚಿತ್ರಮಂದಿರದಲ್ಲಿ ಎಂಜಾಯ್ ಮಾಡಬಹುದಾದಂತಹ ಚಿತ್ರ ಭರಾಟೆ.

ನಮ್ಮ ರೇಟಿಂಗ್ : 3.6/5

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.