ನಿರುದ್ಯೋಗಿಗಳಿಗೆ ಮಾದರಿಯಾಗುತ್ತಾ ಈ “ಲುಂಗಿ”

ರೇಟಿಂಗ್ : 3.5 / 5

ಮುಖೇಶ್ ಹೆಗ್ಡೆ ನಿರ್ಮಾಣದ ಈ ಲುಂಗಿ ಸಿನಿಮಾ ಇಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತಿದ್ದು, ಮತ್ತೊಂದು ಮನೋರಂಜನಾತ್ಮಕ ಸಿಕ್ಕಂತಾಗಿದೆ.

ಕಾಲೇಜ್ ನಲ್ಲಿರುವಾಗ್ಲೆ ಒಬ್ಬಳ ಮೇಲೆ ಇಷ್ಟವಾಗಿದ್ದು, ಕಾಲೇಜಿನಲ್ಲಿ ಓದು ಮತ್ತೆ ಬೇರೆ ಚಟುವಟಿಕೆಗಳೆಲ್ಲಾ ಮುಂದಿರುತ್ತಾನೆ. ನಾಯಕ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡದೇ ಊರವ್ರೆಲ್ಲರ ಸೇವೆ ಮಾಡುತ್ತಾ ಕಾಲ ಕಳೆಯುತ್ತಿರುವಾಗ ಪಕ್ಕದ ಮನೆಗೆ ಬಾಡಿಗೆಗೆ ನಾಯಕಿ ಬರೋದು, ಲವ್ ಸಹ ಆಗೋದು. ನಾಯಕನ ಅಪ್ಪ ತನ್ನ ಮಗನನ್ನು ಬೇರೆ ದೇಶಕ್ಕೆ ಕೆಲ್ಸಕ್ಕೆ ಕಳಿಸಬೇಕು ಅನ್ನೋ ಆಸೆ. ಆದರೆ ನಾಯಕನಿಗೆ ಊರಲ್ಲೇ ಏನಾದ್ರು ಸಾಧಿಸಬೇಕೆಂಬುದು ಅವನ ಉದ್ದೇಶ. ಆಗ ಅವನ ತಲೆಯಲ್ಲಿ ಲುಂಗಿ ಬ್ಯೂಸಿನೆಸ್ ತಲೆಯಸ್ಸಿ ಬರುತ್ತೆ. ಲೋನ್ ಗೋಸ್ಕರ ಅಲೆಯುತ್ತಿರುವಾಗ ಎಲ್ಲೂ ಹಣ ಸಿಗೋದಿಲ್ಲ, ಇಂತಹ ಸಂದರ್ಭದಲ್ಲಿ ಸ್ನೇಹಿತ ಸಹಾಯ ಮಾಡುತ್ತಾರೆ. ಅಂಗಡಿ ಓಪನ್ ಆಗುತ್ತೆ ವ್ಯಾಪಾರ ಚೆನ್ನಾಗಿ ನಡೆಯುತ್ತೆ. ನಾಯಕಿಯ ಮೇಲಿನ ಪ್ರೀತಿಯನ್ನ ತಿಳಿಸುವಷ್ಟರಲ್ಲಿ ನಾಯಕಿಗೆ ಹುಡುಗನ್ನ ನೋಡ್ತಾರೆ. ಅಲ್ಲಿಂದ ಆ ಹುಡುಗಿ ಸಿಕ್ತಾಳ ಇಲ್ವ…ಲುಂಗಿ ಬ್ಯೂಸಿನೆಸ್ ಕಂಟಿನ್ಯೂ ಮಾಡ್ತಾನ ಅನ್ನೋದೆ ಸಿನಿಮಾ ಕಥೆ.

ನಾಯಕ ನಟ ಪ್ರಣವ್ ಹೆಗ್ಡೆ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣೋ ತರ ಇದೆ. ಅವರ ನಟನೆ ತುಂಬಾನೇ ಖುಷಿ ಕೊಡುತ್ತೆ. ಹಾಗೇನೆ ನಟಿಯರಾದ ಅಹಲ್ಯ ಸುರೇಶ್ ಮುದ್ದು ಮುದ್ದಾಗಿ ನಟಿಸಿದ್ದು, ರಾಧಿಕಾ ರಾವ್ ಸಹ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಎಲ್ಲಾ ಕಲಾವಿದರು ಅವರವರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮಂಗಳೂರು ಭಾಗದ ಭಾಷೆಯಲ್ಲಿ ಸಾಗೋ ಕಥೆಯಲ್ಲಿ ಕಾಮಿಡಿ ತುಂಬಾನೇ ವರ್ಕ್ ಆಗಿದ್ದು, ಟೈಮಿಂಗ್ ತುಂಬಾ ಚೆನ್ನಾಗಿ ಬಂದಿದೆ.ಮತ್ತೊಂದು ಗಮನಿಸಬೇಕಾದದ್ದು ಹಿನ್ನಲೆ ಸಂಗೀತ. ಪ್ರಸಾದ್ ಶೆಟ್ಟಿಯವರ ಸಂಗೀತ ಈ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಅಂತ ಹೇಳಬಹುದು.. ಸಂಗೀತದಿಂದ ಭಾವನೆಗಳಿಗೆ ಭಾವ ತುಂಬಿದ್ದಾರೆ ಈ ಚಿತ್ರದಲ್ಲಿ. ಸಿನಿಮಾ ನೋಡುವಾಗ ಹೊಸಬರಾದರೂ, ತುಂಬಾನೇ ನುರಿತ ಸಂಗೀತ ತಂತ್ರಜ್ಞರಂತೆ ಭಾಸವಾಗುತ್ತೆ .

ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿಯವರ ನಿರ್ದೇಶನದ ಬಗ್ಗೆ ಮಾತಾಡುವಾಗಿಲ್ಲ. ಇಬ್ಬರೂ ಸಹ ಅದ್ಬುತವಾಗಿ ಕೆಲ್ಸ ಮಾಡಿದ್ದಾರೆ. ಹಾಡುಗಳ ವಿಚಾರಕ್ಕೆ ಬಂದರೆ, ಎಲ್ಲೂ ಬೇಕಂತ ತುರುಕಿಲ್ಲಾ ಅನ್ಸುತ್ತೆ. ಎಷ್ಟು ಬೇಕೊ ಅಷ್ಟೆ ಹಾಡುಗಳು ಹಾಕಿದ್ದಾರೆ. ಅರ್ಜುನ್ ಬರೆದಿರೋ ಸಾಹಿತ್ಯಗಳಂತು ಕಿವಿಗೆ ತುಂಬಾನೇ ಅನುಭವ ನೀಡುತ್ತವೆ. ಕ್ಯಾಮೆರಾ ವರ್ಕ್ ಸಹ ಚೆನ್ನಾಗಿ ಮಾಡಿದ್ದಾರೆ. ಮೊದಲ ಹಾಡು ಸ್ವಲ್ಪ ಕಥೆಗೆ ಡಿಸ್ಟರ್ಬ್ ಮಾಡ್ತು ಅನ್ನಸ್ತು. ತುಂಬಾ ನೀಟಾಗಿದೆ ಸಿನಿಮಾ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.