ಹೇಗಿದೆ ಸೃಜನ್ ಮತ್ತು ಹರಿಪ್ರಿಯಾ ಅವರ “ಎಲ್ಲಿದ್ದೆ ಇಲ್ಲಿತನಕ”?

ಸೃಜನ್ ಮತ್ತು ಹರಿಪ್ರಿಯಾ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಟ್ರೈಲರ್ ಮತ್ತು ಹಾಡುಗಳಿಂದ ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸಿತ್ತು. ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಇಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಕಿರುತೆರೆಯಲ್ಲಿ ಸಾಕಷ್ಟು ಸಕ್ಸಸ್ಫುಲ್ ಕಾರ್ಯಕ್ರಮಗಳನ್ನು ನೀಡಿರುವ ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಮೊದಲ ಚಿತ್ರ ಎಲ್ಲಿದ್ದೆ ಇಲ್ಲಿತನಕ ಸಕ್ಸಸ್ ಆಯ್ತಾ? ಎಷ್ಟು ದಿನ ಚಿತ್ರಕ್ಕಾಗಿ ಕಾದ ಪ್ರೇಕ್ಷಕರಿಗೆ ಈ ಚಿತ್ರದಿಂದ ಮನರಂಜನೆ ಸಿಕ್ತಾ ? ಮುಂದೆ ನೋಡಿ..

ಎಲ್ಲಿದ್ದೆ ಇಲ್ಲಿತನಕ ಚಿತ್ರಕ್ಕೆ ತೇಜಸ್ವಿ ಅವರ ನಿರ್ದೇಶನ ಇದ್ದು ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗಿದೆ. ಮಲೇಷಿಯಾದಲ್ಲಿ ಇರುವ ನಾಯಕ ಸೂರ್ಯ ಭಾರತಕ್ಕೆ ಬಂದ ಸಂದರ್ಭದಲ್ಲಿ ಆತನಿಗೆ ತನ್ನ ಸ್ನೇಹಿತರು ಚಾಲೆಂಜ್ ಹಾಕುತ್ತಾರೆ ಈ ಚಾಲೆಂಜ್ ಅನ್ನು ಸ್ವೀಕರಿಸಿದ ಸೂರ್ಯ ಭಾರತದಲ್ಲಿಯೇ ಉಳಿದುಕೊಳ್ಳುವಂತಹ ಪರಿಸ್ಥಿತಿ ಆ ಚಾಲೆಂಜ್ನಿಂದ ಉಂಟಾಗುತ್ತದೆ. ಇನ್ನು ಈ ವೇಳೆಗೆ ನಾಯಕಿ ನಂದಿನಿ ಪಾತ್ರಧಾರಿ ಹರಿಪ್ರಿಯಾ ಅವರ ಪರಿಚಯ ಸೃಜನ್ ಅವರಿಗೆ ಆಗುತ್ತದೆ. ನಾಯಕ ಮತ್ತು ನಾಯಕಿ ಇಬ್ಬರೂ ಸಹ ಅದ್ಭುತವಾಗಿ ನಟನೆ ಮಾಡಿದ್ದು ಪೋಷಕ ಪಾತ್ರದಲ್ಲಿ ಅಭಿನಯಿಸಿರುವ ತಾರಾ & ಅವಿನಾಶ್ ನಟನೆ ಸೂಪರ್.

ಹೀಗೆ ಪರಿಚಯವಾದ ನಾಯಕ ಮತ್ತು ನಾಯಕಿ ನಡುವೆ ಲವ್ ಶುರುವಾಗಿ ತದನಂತರ ಆ ಲವ್ ಉಳಿಸಿಕೊಳ್ಳಲು ಸೃಜನ್ ಅವರು ನಡೆಸುವ ಭಿನ್ನ ವಿಭಿನ್ನ ಪ್ಲಾನ್ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದೆ. ಇನ್ನು ಈ ಚಿತ್ರದಲ್ಲಿ ಹೆಚ್ಚಾಗಿ ಎಲ್ಲರನ್ನು ರಂಜಿಸುವುದು ಕಾಮಿಡಿ ಹೌದು ಸೃಜನ್ ಗಿರಿ ತಬಲಾನಾಣಿ ಹಾಗೂ ಸಾಧು ಕೋಕಿಲ ಅವರ ಅಕ್ಕ ಮಿಡಿ ಪ್ರೇಕ್ಷಕರಿಗೆ ಸಖತ್ ಮನರಂಜನೆಯನ್ನು ನೀಡುತ್ತದೆ. ಎಲ್ಲಾ ಸರಿಯಾದ ರೀತಿಯಲ್ಲಿ ಸಾಗುತ್ತಿದೆ ಎಂದುಕೊಳ್ಳುವಾಗಲೇ ಸಚಿನ್ ಮತ್ತು ಹರಿಪ್ರಿಯಾ ನಡುವೆ ಬಿರುಕು ಮೂಡುತ್ತದೆ. ಇತ್ತ ತಾಯಿಯಿಂದಲೂ ಸಹ ಸೃಜನ್ ಅವರ ಪರ ಬೆಂಬಲ ಸಿಗುವುದಿಲ್ಲ , ಪ್ರೀತಿಸಿದ ಹುಡುಗಿಗೆ ವಿರೋಧ ವ್ಯಕ್ತಪಡಿಸಲು ಆರಂಭಿಸುತ್ತಾಳೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿ ಸೃಜನ್ ಅವರು ಹರಿಪ್ರಿಯಾ ಅವರ ಮನಸ್ಸನ್ನು ಗೆಲ್ಲುತ್ತಾರಾ? ತಮ್ಮ ವಿರುದ್ಧ ಉಂಟಾದ ನೆಗೆಟಿವ್ ಅಂಶಗಳನ್ನು ಸರ್ಜನ್ ಅವರು ಸರಿಪಡಿಸಿಕೊಳ್ಳುತ್ತಾರಾ ಎಂಬುದು ಕ್ಲೈಮ್ಯಾಕ್ಸ್.

ಇನ್ನು ಎಲ್ಲಿದ್ದೆ ಇಲ್ಲಿತನಕ ಕಾಮಿಡಿ ಮತ್ತು ಫ್ಯಾಮಿಲಿ ಅಂಶಗಳನ್ನು ಒಳಗೊಂಡಿರುವ ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದಂತಹ ಚಿತ್ರ. ನೀವು ಸಹ ತಪ್ಪದೇ ಒಂದೊಮ್ಮೆ ಚಿತ್ರಮಂದಿರಕ್ಕೆ ತೆರಳಿ ಈ ಚಿತ್ರವನ್ನು ವೀಕ್ಷಿಸಿ.

ರೇಟಿಂಗ್ : 3.5/5

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.