ರಂಗನಾಯಕ ಟೀಸರ್ ನಲ್ಲಿ ಕಮಲದ ಕೈಚಳಕ

ಹತ್ತು ವರ್ಷಗಳ ನಂತರ ಮತ್ತೆ ಒಂದಾಗ್ತಿರೋ ಗುರುಪ್ರಸಾದ್ ಮತ್ತು ಜಗ್ಗೇಶ್ ಅವರ ಜೋಡಿ ಇವಾಗ ರಂಗನಾಯಕ ಎಂಬ ಟೈಟಲ್ ನೊಂದಿಗೆ ಟೀಸರ್ ಬಿಡುಗಡೆ ಮಾಡಿದ್ದು, ಮೇಲ್ನೋಟಕ್ಕೆ ಸಿನಿಮಾ ರಾಜಕೀಯ ತಿಕ್ಕಾಟದಲ್ಲಿರೋ ಕಥೆ ಅನ್ನೋ ತರ ಕಾಣ್ತಿದೆ. ಟೀಸರ್ ನಲ್ಲಿ ಪೌರಾಣಿಕ ಪಾತ್ರಧಾರಿಗಳು ಸಿನಿಮಾದ ತಂತ್ರಜ್ಞರನ್ನು ಪರಿಚಯಿಸುತ್ತಾ ಅಲ್ಲಿ ಕಮಲವನ್ನು ಸೆರೆಹಿಡಿದು, ಹಸ್ತದ ಗುರುತನ್ನೂ ತಳ್ಳುವ ದೃಶ್ಯ ರಾಜಕೀಯ ತಿಕ್ಕಾಟದ ಕಥೆಗೆ ಸಾಕ್ಷಿಯಾಗಿದೆ.

ಮಠ ಮತ್ತು ಎದ್ದೇಳು ಮಂಜುನಾಥ ಎಂಬ ಎರಡು ಸಿನಿಮಾಗಳ ನಂತರ ತುಂಬಾನೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರೋ ರಂಗನಾಯಕ ಚಿತ್ರಕ್ಕೆ ಮೊದಲ ಟೀಸರ್ ನಲ್ಲೇ ಕಾಂಟ್ರವರ್ಸಿಗೆ ಎಡೆಮಾಡಿರೋದು ಸಿನಿಮಾದವರ ಗಿಮಿಕ್ ಅಥವಾ ಕಥೆಯೇ ಹಾಗಿರೋದಾ ಅನ್ನೋ ಅನುಮಾನವಂತೂ ಬರುತ್ತೆ.

ಈ ರಂಗನಾಯಕನಿಗೆ ಮನೋಹರ್ ಜೋಶಿ ಛಾಯಾಗ್ರಹಣ ಮಾಡಿದರೆ, ಅನೂಪ್ ಸಿಳೀನ್ ಸಂಗೀತ ನೀಡುತ್ತಿದ್ದಾರೆ. ಇನ್ನುಳಿದಂತೆ ಯಾವ ಪಾತ್ರಗಳು ಆಯ್ಕೆ ಪೂರ್ತಿಯಾಗಿಲ್ಲ. ಒಟ್ನಲ್ಲಿ ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಒಂದು ಸಂದೇಶ ಮತ್ತು ಉತ್ತಮ ಸಿನಿಮಾ ಕೊಡ್ತಾರನ್ನೋ ಭರವಸೆಯಂತೂ ಇದೆ.

ಸದ್ಯ ಜಗ್ಗೇಶ್ ಅವರು ತೋತಾಪುರಿಯಲ್ಲಿ ಬ್ಯೂಸಿ ಇದ್ದು, ನಂತರ ಈ ರಂಗನಾಯಕನ ಜೊತೆ ಸೇರಿಕೊಳ್ಳಲಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.