ಮುದ್ದೆ ಮೇಲೂ ಒಂದು ಸಾಂಗ್ ಬಂತು..

ಇತ್ತೀಚಿಗೆ ಹೊಸಬರ ಚಿತ್ರಗಳು ಮತ್ತು ಹಾಡುಗಳು ಸದ್ದು ಮಾಡುತ್ತಿದ್ದು, ವಿಶೇಷವಾಗಿ ಹೊಸತನದ ಪ್ರಯೋಗಗಳು ಸೌಂಡ್ ಮಾಡುತ್ತಿವೆ. ಅಂತಹ ಹೊಸತನದ ಪ್ರಯೋಗವೇ ಈ ಮುದ್ದೆ ಸಾಂಗ್. ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಲ ಚಿತ್ರದ ಈ ಸಾಂಗ್ ಬಿಡುಗಡೆಯಾಗಿದ್ದು, ಮುದ್ದೆ ಬಗ್ಗೆ ಮಾಡಿರೋ ಮೊದಲ ಹಾಡು.

ಕನ್ನಡದ ಕವಿರತ್ನ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರೋ ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿಯವರು ಸಂಗೀತ ನೀಡಿದ್ದು, ಹೊಸತನದಲ್ಲಿ ಜನರಿಗೆ ಇಷ್ಟವಾಗಿದೆ. ಈ ಹಾಡಿನ ಮತ್ತೊಂದು ವಿಶೇಷ ಏನಂದರೆ ಈ ಹಾಡನ್ನು ಟಗರು ಖ್ಯಾತಿಯ ಅಂಥೋನಿ ದಾಸ್ ಹಾಡಿರೋದು. ಮುದ್ದೆಯ ಮಹತ್ವ, ಆ ರಾಗಿಯ ಸತ್ವ ಹೀಗೆ ಸಾಕಷ್ಟು ವಿಚಾರಗಳನ್ನು ಗ್ರಾಮೀಣ ಶೈಲಿಯಲ್ಲಿ ಹಾಡಿನ ಮೂಲಕ ಹೇಳಲು ಹೊರಟಿದ್ದಾರೆ. ಮಂಡ್ಯ ಸೊಗಡಿನ ಈ ಚಿತ್ರದಲ್ಲಿ ಇದೇ ತರಹ ಹಳ್ಳಿ ಹಾಡುಗಳಿದ್ದು, ಸದ್ಯಕ್ಕೆ ಮೊದಲ ಸಾಂಗ್ ಮಾತ್ರ ಬಿಡುಗಡೆಯಾಗಿದೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ವಿಶೇಷವಾಗಿ ಹಾಡನ್ನು ಬಿಡುಗಡೆ ಮಾಡಿದ ಚಿತ್ರತಂಡ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ, ಆ ಕಾರ್ಯಕ್ರಮಕ್ಕೆ ಯೋಗರಾಜ್ ಭಟ್ ಮತ್ತು ನಾಗೇಂದ್ರ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಬಂದು ಚಿತ್ರತಂಡಕ್ಕೆ ಹರಸಿದರು.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.