ಅಕ್ಟೋಬರ್ 11 ರಿಂದ ದೇವರು ಹುಡುಕೋದಕ್ಕೆ ಶುರು.

ಕಷ್ಟ ಬಂದಾಗ, ನೋವಾದಾಗ ದೇವರನ್ನ ನಾವುಗಳು ಕರೆಯುವುದು ಸಹಜ. ಆದರೆ ಇಲ್ಲೊಬ್ಬ ಚಿಕ್ಕ ಹುಡ್ಗ ದೇವರನ್ನ ಹುಡುಕಲು ಹೊರಟಿದ್ದಾನೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ತನ್ನ ತಂದೆ ತಾಯಿ ದೇವರ ಬಳಿ ಇದ್ದಾರೆಂದು ಹುಡುಕಿ ಹೋಗುವುದೇ ದೇವರು ಬೇಕಾಗಿದ್ದಾರೆ ಚಿತ್ರದ ಕಥಾಹಂದರ.

ಹಿರಿಯ ನಟ ಶಿವರಾಮ್ ಅವರು ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರನಿರ್ವಹಿಸಿದ್ದು, ಆ ಮಗುವನ್ನು ದತ್ತು ತಗೊಂಡು ಸಲಹುತ್ತಿರುತ್ತಾರೆ. ಮಗು ದೇವರು ಹುಡ್ಕೊಂಡು ಬೆಂಗಳೂರಿಗೂ ಬಂದಾಗ ಅಲ್ಲಿ ಏನಾಗುತ್ತೆ ಯಾರನ್ನ ಮೀಟ್ ಮಾಡ್ತಾನೆ. ಹೇಗೆ ದೇವರನ್ನು ಹುಡುಕ್ತಾನೆ ಅನ್ನೋದನ್ನ ಚಿತ್ರದ ಎಳೆ ತಗೊಂಡು ಸಿನಿಮಾ ಮಾಡಿದ್ದಾರೆ. ಆ ಮಗುವಿನ ಪಾತ್ರಧಾರಿಯಾಗಿ ಮಾಸ್ಟರ್ ಅನೂಪ್ ನಟಿಸಿದ್ದು, ಟ್ರೈಲರ್ ನಲ್ಲಿ ತಂಬಾನೇ ಮುಗ್ದವಾಗಿ ಕಾಣುತ್ತಾನೆ. ಅಷ್ಟೆ ನೀಟಾಗಿ ನಟನೆಯನ್ನು ಸಹ ಮಾಡಿದ್ದಾನೆ.

ಇನ್ನುಳಿದಂತೆ ತಾರಾಂಗಣದಲ್ಲಿ ಪ್ರಸಾದ್ ವಸಿಷ್ಟ ಮತ್ತೆ ಸತ್ಯನಾಥ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಎರಡು ಪಾತ್ರಗಳು ಆ ಮಗುವಿನ ಜರ್ನಿಯಲ್ಲಿ ಬರುವಂತ ಬಹುಮುಖ್ಯ ಪಾತ್ರಗಳು. ಚಿತ್ರದಲ್ಲಿ ಐದು ಹಾಡುಗಳಿದ್ದು, ಮೊದಲ ಬಾರಿಗೆ ಕನ್ನಡದಲ್ಲಿ ಜ್ಯೂವಿನ್ ಸಿಂಗ್ ಸಂಗೀತ ನೀಡಿದ್ದಾರೆ. ಹಾಡುಗಳಿಗೆ ವಿಜಯ್ ವಿಶ್ವಮಣಿ ಸಾಹಿತ್ಯ ಬರೆದರೆ, ಶ್ವೇತ ಸುಬ್ರಮಣ್ಯನ್, ನಿಧಿನ್ ಲಾಲ್, ಮಾರ್ಟಿನ್ ಯೋ, ಅಶ್ರಫ್ ಜಾನ್ಸನ್ ಹೀಗೆ ಸಾಕಷ್ಟು ಗಾಯಕರು ಹಾಡಿದ್ದಾರೆ.

ಹಾರೈಝೋನ್ ಮೂವಿನ್ ನಿರ್ಮಾಣದ ಈ ಚಿತ್ರಕ್ಕೆ ಕೆಂಜ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಇದೇ ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರ ಒಟ್ಟು 50 ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್ವುಡ್ ಪಿಕ್ಚರ್ಸ್ ನವರು ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.