ಭಜರಂಗಿ – 2 ಹೇರ್ ಸ್ಟೈಲ್ ಟ್ರೆಂಡ್

ಚಂದನವನದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವಣ್ಣ ಏನೇ ಮಾಡಿದ್ರು ಅದೊಂದು ಟ್ರೆಂಡ್. ಅದರಲ್ಲಿ ಮುಖ್ಯವಾಗಿ ಅವರ ಸಿನಿಮಾಗಳಿಗೆ ಮಾಡೋ ಹೇರ್ ಸ್ಟೈಲ್. ಇವಾಗ ಸದ್ಯಕ್ಕೆ ಭಜರಂಗಿ -2 ಸಿನಿಮಾಕ್ಕೆ ಹೊಸ ಹೇರ್ ಕಟ್ ಮಾಡ್ಸಿರೋ ಹ್ಯಾಟ್ರಿಕ್ ಹಿರೋ ಶಿವಣ್ಣ ಅವರ ಹೇರ್ ಸ್ಟೈಲ್ ನ ಅಭಿಮಾನಿಗಳು ಸಹ ಫಾಲೋ ಮಾಡ್ತಿದ್ದು, ಮತ್ತೆ ಟ್ರೆಂಡ್ ಸೃಷ್ಟಿಯಾಗ್ತಿದೆ.

ಇದಕ್ಕೂ ಮುಂಚೆ ಜೋಗಿ, ಜೋಗಯ್ಯ, ಮಾದೇಶ ಹೇರ್ ಸ್ಟೈಲ್ ಎಲ್ಲಾ ಅಭಿಮಾನಿಗಳ ನಿದ್ದೆಗೆಡಿಸಿತ್ತು, ಹಾಗೇನೆ ಸತ್ಯ ಇನ್ ಲವ್ ಚಿತ್ರದಲ್ಲೂ ಬೇರೆ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಮರೆಯುವಂತಿಲ್ಲ. ಮೊದಲ ಸಿನಿಮಾ ಆನಂದ್ ನಲ್ಲೇ ಶಿವಣ್ಣ ಹೇರ್ ಸ್ಟೈಲ್ ಗೆ ಎಷ್ಟೋ ಯುವತಿಯರು ಫಿಧಾ ಆಗಿದ್ರೋ ಲೆಕ್ಕವಿಲ್ಲ. ಅವತ್ತಿಂದ ಇವತ್ತಿನವರೆಗೂ ಅದೇ ಟ್ರೆಂಡ್ ಅದೇ ಚಾರ್ಮ್.

ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿ ಎರಡನೇ ಶೆಡ್ಯೂಲ್ ಗೆ ಕೊಚ್ಚಿಗೆ ಹೋಗಿದೆ ಭಜರಂಗಿ 2ಚಿತ್ರತಂಡ.
ಸದ್ಯಕ್ಕೆ ಆಯುಷ್ಮಾನ್ ಭವ ಮತ್ತೆ ದ್ರೋಣ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿ ಇದ್ದು, ನವೆಂಬರ್ ಒಂದಕ್ಕೆ ರಿಲೀಸ್ ಆಗ್ತಿರೋ ಆಯುಷ್ಮಾನ್ ಭವ್ ಸಿನಿಮಾ ಬಿಡುಗಡೆ ನಂತರ ದ್ರೋಣ ಸಹ ಡಿಸೆಂಬರ್ ನಲ್ಲಿ ಬಿಡುಗಡೆ ತಯಾರಿ ನಡೆಯುತ್ತಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.