ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಮಾಲ್ಗುಡಿ ಡೇಸ್ ಚಿತ್ರತಂಡ..!

ಕಳೆದ ವರ್ಷದಂತೆ ಈ ವರ್ಷವೂ ಸಹ ರಾಜ್ಯದಲ್ಲಿ ಮಳೆಯ ಪ್ರಭಾವ ಅತಿ ದೊಡ್ಡ ಮಟ್ಟದಲ್ಲಿಯೇ ಇದ್ದು , ಕರ್ನಾಟಕದ ಹಲವಾರು ಭಾಗಗಳು ಪ್ರವಾಹದ ಹೊಡೆತಕ್ಕೆ ತತ್ತರಿಸಿ ಹೋಗಿವೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳು ಪ್ರವಾಹದ ಭೀಕರತೆಗೆ ನಲುಗಿ ಹೋಗಿದ್ದು , ಕಳೆದ ವರ್ಷದ ರೀತಿ ಈ ವರ್ಷವೂ ಸಹ ಕೊಡಗಿನಲ್ಲೂ ಸಹ ಪ್ರವಾಹ ದೊಡ್ಡ ಮಟ್ಟದಲ್ಲಿಯೇ ಉಂಟಾಗಿದೆ.

ಹೀಗಾಗಿ ಪ್ರವಾಹಕ್ಕೊಳಗಾದ ಜನರಿಗೆ ಸಹಾಯಹಸ್ತ ಬೇಕಾಗಿದ್ದ ಸಂದರ್ಭದಲ್ಲಿ ಹಲವಾರು ಮಂದಿ ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇನ್ನು ಇದೇ ರೀತಿ ಕನ್ನಡದ ಮುಂದಿನ ಚಿತ್ರವಾದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರತಂಡ ಸಹ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ.

ಸುಮಾರು 6.03 ಲಕ್ಷ ರೂಪಾಯಿಯ ಚೆಕ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಿಗೆ ಮಾಲ್ಗುಡಿ ಡೇಸ್ ನ ನಿರ್ಮಾಪಕರು & ಸ್ವಯಂಪ್ರಭಾ ಸಮೂಹದ ಮುಖ್ಯಸ್ಥ ಕೆ ರತ್ನಾಕರ್ ಅವರು ಹಸ್ತಾಂತರಿಸಿದರು. ಸಂಸ್ಥೆಯ ಪಾಲುದಾರರಾದ ಲಕ್ಷ್ಮೀ ಆರ್ ಕಾಮತ್ , ಕೆ ಗಣೇಶ್ ಕಾಮತ್ & ಮಾಲ್ಗುಡಿ ಡೇಸ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ರವಿಶಂಕರ್ ಪೈ ಈ ಸಂದರ್ಭದಲ್ಲಿ ಹಾಜರಿದ್ದರು.

ಅಷ್ಟೇ ಅಲ್ಲದೆ ಮಾಲ್ಗುಡಿ ಡೇಸ್ ಚಿತ್ರತಂಡ ನೆರೆ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಮೂಡಿಗೆರೆ, ಕಳಸ, ಬಾಳೆಹೊನ್ನೂರು ಮತ್ತು ಮಾಗುಂಡಿ ಊರುಗಳಲ್ಲಿ ವಿತರಣೆಯನ್ನು ಮಾಡುತ್ತಿದೆ. “ಕೇವಲ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ನಿಮ್ಮ ಊರುಗಳಿಗೆ ನಾವು ಬರುವವರಲ್ಲ, ನಿಮಗೆ ಕಷ್ಟ ಬಂದಾಗಲೂ ಸಹ ನಾವು ನಿಮ್ಮ ಬಳಿ ಸಹಾಯಹಸ್ತ ಚಾಚುತ್ತಾ ಬರುತ್ತೇವೆ” ಎಂದು ಮಾಲ್ಗುಡಿ ಡೇಸ್ ಚಿತ್ರ ತಂಡ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.