200 ರೂಪಾಯಿಗೂ ಕಷ್ಟ ಪಡ್ತಾ ಇದ್ದ ಸೈನಿಯನ್ನು ಕಂಡ ಗಂಭೀರ್ ಈ ಕೆಲಸ ಮಾಡಿದ್ರು..!

ಸದ್ಯ ಕ್ರಿಕೆಟ್ ಪ್ರೇಮಿಗಳ ಫೇವರಿಟ್ ಬೌಲರ್ ಗಳ ಪಟ್ಟಿಯಲ್ಲಿರೋ ಕೆಲ ಬೌಲರ್ ಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ನವದೀಪ್ ಸೈನಿ ಕೂಡ ಒಬ್ಬರು.. ಕಳೆದ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸೈನಿ ಇದೀಗ ಮುಂದಿನ ತಿಂಗಳು ನಡೆಯಲಿರುವ ವೆಸ್ಟ್‌ ಇಂಡೀಸ್ ವಿರುದ್ಧದ ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದಾರೆ.

ಇನ್ನು ನವದೀಪ್ ಸೈನಿ ಅವರು ಇಷ್ಟು ದೊಡ್ಡ ಮಟ್ಟಕ್ಕೆ ಸುಲಭವಾಗಿ ಬಂದಿಲ್ಲ.. ಅವರು ಹರಿಯಾಣದ ಕರ್ನಾಲ್ ಟೂರ್ನಮೆಂಟ್ ನಲ್ಲಿ ಕೇವಲ 200 ರೂಪಾಯಿಗೆ ಬೌಲಿಂಗ್ ಮಾಡ್ತಾ ಇದ್ರು. ತದನಂತರ ದೆಹಲಿ ತಂಡದ ಪರ ಗಂಭೀರ್ ನಾಯಕತ್ವದ ಅಡಿಯಲ್ಲಿ ಆಡೋ ಅವಕಾಶ ಸೈನಿಯವರಿಗೆ ಸಿಕ್ಕಿತ್ತು.

ಹೀಗೆ ಸೈನಿಯವರ ಬೌಲಿಂಗ್ ಗಮನಿಸಿದ ಗಂಭೀರ್ ಫಿದಾ ಆಗಿ ಸೈನಿಯವರಿಗೆ ದೆಹಲಿ ರಾಜ್ಯ ತಂಡದಲ್ಲಿ ಸ್ಥಾನ ನೀಡುವಂತೆ ಪಟ್ಟು ಹಿಡಿದರು. ಆರಂಭದಲ್ಲಿ ಸೈನಿ ಅವರಿಗೆ ಅವಕಾಶ ನೀಡಲು ದೆಹಲಿ ಕ್ರಿಕೆಟ್ ಸಂಸ್ಥೆ ಹಿಂದೇಟು ಹಾಕಿತ್ತು. ಆದರೂ ಸಹ ಪಟ್ಟು ಬಿಡದ ಗೌತಮ್ ಗಂಭೀರ್ ಅವರು ನವದೀಪ್ ಸೈನಿ ಅವರಿಗೆ ಅವಕಾಶ ನೀಡಲೇ ಬೇಕೆಂದು ಹರಸಾಹಸ ಪಟ್ಟು ಚಾನ್ಸ್ ಕೊಡಿಸಿದರು. ಹೀಗೆ ಗಂಭೀರ್ ಅವರ ದಿಟ್ಟ ನಿರ್ಧಾರದಿಂದ ಒಳ್ಳೆಯ ಅವಕಾಶ ಪಡೆದ ನವದೀಪ್ ಸೈನಿ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ತಯಾರಾಗಿದ್ದಾರೆ.

ಕೇವಲ ಇನ್ನೂರು ರೂಪಾಯಿಗೆ ಕ್ರಿಕೆಟ್ ಆಡುತ್ತಿದ್ದ ನವದೀಪ್ ಸೈನಿ ಇದೀಗ ಲಕ್ಷ ಲಕ್ಷ ಪಡೆಯುವ ರೇಂಜಿಗೆ ಬೆಳೆದಿದ್ದಾರೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.