ಲವ್ ಮ್ಯಾರೇಜ್ ಆಗಲಿದ್ದಾರಂತೆ ಆ್ಯಕ್ಷನ್ ಪ್ರಿನ್ಸ್ ಧ್ರುವ..!

0
100

ಅದ್ದೂರಿ ಬಹದ್ದೂರ್ ಮತ್ತು ಭರ್ಜರಿ ಅಂತಹ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಹ್ಯಾಟ್ರಿಕ್ ಬಾರಿಸಿದ ಧ್ರುವ ಸರ್ಜಾ ಅವರು ಇದೀಗ ನಂದ ಕಿಶೋರ್ ಅವರು ನಿರ್ದೇಶಿಸಲಿರುವ ಪೊಗರು ಚಿತ್ರದಲ್ಲಿ ತಮ್ಮ ಪವರನ್ನು ತೋರಿಸಲು ಸಿದ್ಧರಿದ್ದಾರೆ.

 

ಇನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗಷ್ಟೇ ಪೊಗರು ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಟೀಸರ್ ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

 

 

 

ಇನ್ನು ತಮ್ಮ ಹುಟ್ಟುಹಬ್ಬದ ದಿನದಂದು ಪತ್ರಕರ್ತರ ಜೊತೆ ಮಾತನಾಡಿದ ಧ್ರುವ ಸರ್ಜಾ ತಾವು ಮದುವೆಯಾಗಲಿರುವ ಬಗ್ಗೆ ಸುದ್ದಿಯನ್ನು ಬಿಟ್ಟುಕೊಟ್ಟರು. ಹೌದು ಧ್ರುವ ಅವರೇ ಸ್ವತಃ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು ಅವರು ಲವ್ ಮ್ಯಾರೇಜ್ ಆಗುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಣ್ಣನಿಗೆ ಮದುವೆಯಾಯಿತು ನಾನು ಸಹ ಮೂವತ್ತು ದಾಟಿದ ನಂತರ ಮದುವೆಯಾಗಬೇಕು ಎಂದು ಈ ಹಿಂದೆಯೇ ಅಂದುಕೊಂಡಿದ್ದೆ ಅದರಂತೆ ಇದೀಗ ನಾನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 

 

ಇನ್ನು ಧ್ರುವ ಅವರು ತಮಗೆ ಸೂಟ್ ಆಗುವ ಹುಡುಗಿಯನ್ನು ಅವರೇ ಆಯ್ಕೆ ಮಾಡಿ ಮದುವೆಯಾಗಲಿದ್ದಾರೆ ಎಂಬುದು ಅವರ ಮಾತಿನ ಧಾಟಿಯಲ್ಲಿಯೇ ತಿಳಿಯುತ್ತಿತ್ತು. ಧ್ರುವ ಅವರು ಮಾತನಾಡಿದ್ದನ್ನು ನೋಡಿದ ನಂತರ ಅಭಿಮಾನಿಗಳು ಧ್ರುವ ಅವರು ಇಷ್ಟಪಡುತ್ತಿರುವ ಆ ಹುಡುಗಿ ಯಾರು ಎಂಬ ಕುತೂಹಲಕ್ಕೆ ಒಳಗಾಗಿದ್ದಾರೆ.

 

LEAVE A REPLY

Please enter your comment!
Please enter your name here