ನಟ ಚಿರಂಜೀವಿ ಜತೆ ರಾಧಿಕಾ ರೋಮ್ಯಾನ್ಸ್..!

0
243

ರಾಧಿಕಾ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು. ಕನ್ನಡದ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಒಳ್ಳೆಯ ಹೆಸರು ಮಾಡಿರುವ ರಾಧಿಕಾ ಅವರು ಈಗಾಗಲೇ ಅನೇಕ ಸ್ಟಾರ್ ನಟರುಗಳ ಜತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

 

 

ಆದರೆ ಇತ್ತೀಚಿನ ಕೆಲ ದಿನಗಳಿಂದ ರಾಧಿಕಾ ಅವರು ಯಾವುದೇ ಚಿತ್ರಗಳಲ್ಲಿ ಅಭಿನಯಿಸದೆ ಸೈಲೆಂಟಾಗಿ ಉಳಿದುಬಿಟ್ಟಿದ್ದರು. ಕನ್ನಡದ ಯಾವುದಾದರೂ ಒಂದು ಚಿತ್ರದ ಮೂಲಕ ರಾಧಿಕಾ ಅವರು ಕಂಬ್ಯಾಕ್ ಮಾಡಲಿದ್ದಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು.

 

 

ಇದೀಗ ಬಂದಿರುವ ಸುದ್ದಿಯ ಪ್ರಕಾರ ನಟಿ ರಾಧಿಕಾ ಅವರು ತೆಲುಗಿನ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೌದು ನಟಿ ರಾಧಿಕಾ ಅವರು ಚಿರಂಜೀವಿ ಅವರ 152ನೇ ಚಿತ್ರದಲ್ಲಿ ಚಿರು ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.

 

 

 

 

ಇನ್ನು ಈ ಚಿತ್ರವನ್ನು ಬೊಯಪಟಿ ಶ್ರೀನು ಅವರು ನಿರ್ದೇಶಿಸಲಿದ್ದು ಚಿರಂಜೀವಿ ಅವರು ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದು ಈ ಚಿತ್ರಕ್ಕೆ ನಾಯಕಿಯಾಗಿ ರಾಧಿಕಾ ಅವರು ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

 

 

 

LEAVE A REPLY

Please enter your comment!
Please enter your name here