‘ದಿ ವಿಲನ್’ ಸಿಂಗರ್ ಮೇಲೆ ಲೈಂಗಿಕ ಕಿರುಕುಳ ಆರೋಪ..!

  0
  380

  ಇತ್ತೀಚಿನ ಕೆಲ ದಿನಗಳಿಂದ ಸಖತ್ ಸದ್ದು ಮಾಡುತ್ತಿರುವ ಹಾಡೆಂದರೆ ಅದು ದಿ ವಿಲನ್ ಚಿತ್ರದ ಟಿಕ್ ಟಿಕ್ ಸಾಂಗ್. ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಕೇವಲ ಆಡಿಯೋವನ್ನು ಎರಡು ಕೋಟಿಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದು ಹೊಸ ದಾಖಲೆ ಇದಾಗಿದೆ. ಇನ್ನು ಈ ಹಾಡು ಇಷ್ಟರ ಮಟ್ಟಿಗೆ ಹಿಟ್ ಆಗಲು ಈ ಹಾಡನ್ನು ಹಾಡಿರುವ ಗಾಯಕರು ಸಹ ಒಂದು ಕಾರಣ ಎಂದರೆ ತಪ್ಪಾಗಲಾರದು.

   

   

  ಹೌದು ಈ ಹಾಡಿಗೆ ದನಿಯಾಗಿರುವ ಗಾಯಕ ಬೇರೆ ಯಾರೂ ಅಲ್ಲ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೈಲಾಶ್ ಖೇರ್ ಅವರು. ಮೂಲತಃ ಬಾಲಿವುಡ್ ಮೂಲದ ಈ ಸಿಂಗರ್ ದಕ್ಷಿಣ ಭಾರತದ ಅನೇಕ ಹಾಡುಗಳನ್ನು ಹಾಡಿ ಇಲ್ಲಿಯೂ ಸಹ ಬಹಳಷ್ಟು ಜನಪ್ರಿಯರಾಗಿದ್ದಾರೆ.

   

   

  ಈ ಹಿಂದೆ ಹಲವಾರು ಕನ್ನಡ ಚಿತ್ರಗೀತೆಗಳನ್ನು ಹಾಡಿರುವ ಕೈಲಾಶ್ ಖೇರ್ ಅವರು ಕನ್ನಡ ಸಿನಿಪ್ರೇಮಿಗಳಿಗೆ ಪರಿಚಿತರು. ಇನ್ನು ಇದೀಗ ಈ ಸಿಂಗರ್ ಮೇಲೆ ಲೈಂಗಿಕ ಕಿರುಕುಳ ಆರೋಪವೊಂದು ಕೇಳಿ ಬರುತ್ತಿದ್ದು ಇವರನ್ನು ಸಂದರ್ಶಿಸಲು ತೆರಳಿದ ಜರ್ನಲಿಸ್ಟ್ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸ್ವತಃ ಜರ್ನಲಿಸ್ಟ್ ಇತ್ತೀಚೆಗಷ್ಟೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾಳೆ.

   

   

   

   

  ಫೋಟೋ ಜರ್ನಲಿಸ್ಟ್ ಆದ ನಟಶಾ ಹೇಮ್ರಾಜನ್ ಎಂಬ ಯುವತಿ ಕೈಲಾಶ್ ಕೇರ್ ಅವರನ್ನು ಸಂದರ್ಶಿಸಲು ತೆರಳಿದ್ದಾಗ ಈ ಘಟನೆ ನಡೆಯಿತೆಂದು ಆಕೆಯೇ ಇತ್ತೀಚೆಗಷ್ಟೇ ಹೇಳಿಕೊಂಡಿದ್ದಾಳೆ.

   

   

   

   

   

  LEAVE A REPLY

  Please enter your comment!
  Please enter your name here