ಕನ್ನಡದ ಸ್ಟಾರ್ ನಟನ ಜೊತೆ ರಮ್ಯಾ..!

2
642

ಸ್ಯಾಂಡಲ್ ವುಡ್ ನ ಮೋಹಕತಾರೆ ರಮ್ಯಾ ಅವರು ರಾಜಕೀಯ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಂತರ ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರ ಉಳಿದದ್ದು ನಿಮಗೆಲ್ಲಾ ತಿಳಿದೇ ಇದೆ.

 

 

ಕನ್ನಡದ ಈಗಿನ ಎಲ್ಲಾ ಸ್ಟಾರ್ ನಟರುಗಳ ಜೊತೆ ಈಗಾಗಲೇ ಅಭಿನಯಿಸಿರುವ ರಮ್ಯಾ ಕನ್ನಡ ಸಿನಿರಸಿಕರ ಪಾಲಿನ ಆಲ್ ಟೈಂ ನಂಬರ್ ೧ ನಟಿ.

 

 

 

 

ತನ್ನ ಬ್ಯೂಟಿ & ನಟನೆಯ ಮೂಲಕ ಕನ್ನಡ ಚಿತ್ರರಸಿಕರ ಮನದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ನೆಲೆಸಿರುವ ರಮ್ಯಾ ಇದೀಗ ಮತ್ತೆ ಬಣ್ಣಹಚ್ಚುವ ಮುನ್ಸೂಚನೆಯನ್ನು ನೀಡಿದ್ದಾರೆ. ಹೌದು ರಮ್ಯಾ ಮತ್ತೆ ಚಿತ್ರದಲ್ಲಿ ನಟಿಸಲಿದ್ದು ಕನ್ನಡದ ಸ್ಟಾರ್ ನಟರೊಬ್ಬರ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.

 

 

ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ರಮ್ಯಾ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಗಂಡುಗಲಿ ಮದಕರಿನಾಯಕ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

2 COMMENTS

LEAVE A REPLY

Please enter your comment!
Please enter your name here